ಭಾರತ, ಮಾರ್ಚ್ 26 -- Bharjari Bachelors reality show: ದಿವಂಗತ ಬುಲೆಟ್‌ ಪ್ರಕಾಶ್‌ ಮಗ, ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಕ್ಷಕ್‌ ಬುಲೆಟ್‌ (Rakshak Bullet) ಈಗ ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದಲ್ಲಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಇವರು ಹೊಡೆದ ಡೈಲಾಗೊಂದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ನಟ ದರ್ಶನ್‌ ನಟಿಸಿದ ಬುಲ್‌ ಬುಲ್‌ ಸಿನಿಮಾದ ಡೈಲಾಗ್‌ ಹೊಡೆದಿರುವುದೇ ಇವರು ಮಾಡಿದ ತಪ್ಪು. "ನಿಮ್ಮನ್ನು ನೋಡಿದಾಗ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು .... " ಡೈಲಾಗ್‌ ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ವರದಿಗಳ ಪ್ರಕಾರ ರಕ್ಷಕ್‌ ಬುಲೆಟ್‌ ವಿರುದ್ಧ ಪೊಲೀಸ್‌ ಆಯುಕ್ತರಿಗೆ ದೂರು ಸಲ್ಲಿಸುತ್ತಿದ್ದಾರಂತೆ.

ಎರಡು ವಾರದ ಹಿಂದೆ ಭರ್ಜರಿ ಬ್ಯಾಚುಲರ್ಸ್‌ ಕಿರುತೆರೆ ಕಾರ್ಯಕ್ರಮದಲ್ಲಿ ಎಲ್ಲಾ ಬ್ಯಾಚುಲರ್ಸ್‌ ಮತ್ತು ಏಂಜಲ್ಸ್‌ಗಳಿಗೆ ಟಾಸ್ಕ್‌ ನೀಡಲಾಗಿತ್ತು. ಸೂಪರ್‌ಹಿಟ್‌ ಸಿನಿಮಾಗಳ ಸೀನ್‌ಗಳನ್ನು ಮರುಸೃಷ್ಟಿ ಮಾಡಿ ವೀಕ್ಷಕರಿಗೆ ಮನ...