Bengaluru, ಏಪ್ರಿಲ್ 24 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಏಪ್ರಿಲ್ 23ರ ಸಂಚಿಕೆಯಲ್ಲಿ ಜಾಹ್ನವಿಯನ್ನು ಹುಡುಕಿಕೊಂಡು ಮನೆಗೆ ಬಂದಿದ್ದ ಜಯಂತ, ಅವಳನ್ನು ತನ್ನೊಡನೆ ಬರುವಂತೆ ಒತ್ತಾಯಿಸಿದ್ದಾನೆ. ನೀವಿಲ್ಲದೇ ನಾನಿರುವುದಿಲ್ಲ ಎಂದು ಜಯಂತ, ಜೋರಾಗಿ ಜಾಹ್ನವಿಯ ಕೈಯನ್ನು ಹಿಡಿದು ಎಳೆದಿದ್ದಾನೆ. ಆಗ ನಾನು ಎಲ್ಲಿಗೂ ಬರುವುದಿಲ್ಲ, ನಿಮ್ಮ ಜೊತೆ ಅಂತೂ ಖಂಡಿತವಾಗಿಯೂ ಬರಲ್ಲ ಎಂದು ಜೋರಾಗಿ ಕೈಯನ್ನು ಹಿಡಿದು ಜಾಹ್ನವಿ ಎಳೆದಿದ್ದಾಳೆ. ಅಷ್ಟರಲ್ಲಿ ಅವಳಿಗೆ ಎಚ್ಚರವಾಗಿದೆ, ಇಷ್ಟು ಹೊತ್ತು ನಡೆದಿದ್ದು ಎಲ್ಲವೂ ಕನಸು ಎಂದು ನಿದ್ದೆಯಿಂದ ಎದ್ದು ಭಯಗೊಂಡು ಕುಳಿತಿದ್ದಾಳೆ. ಈ ಕನಸು ಯಾವತ್ತೂ ನನಸಾಗುವುದು ಬೇಡ, ಕನಸಾಗಿಯೇ ಉಳಿಯಲಿ ಎಂದು ಹೇಳಿದ್ದಾಳೆ.

ಜಯಂತ ಮುಂದೆ ಯಾವತ್ತಾದರೂ ಹೀಗೇ ನನ್ನನ್ನು ಹುಡುಕಿಕೊಂಡು ಬರಬಹುದು, ಅದಕ್ಕೆ ಅವಕಾಶ ಕೊಡಬಾರದು, ಅವನಿರುವಲ್ಲಿಗೆ ನಾನು ಯಾವತ್ತೂ ಹೋಗುವುದಿಲ್ಲ ಎಂದು ಜಾಹ್ನವಿ ಆಶಿಸಿದ್ದಾಳೆ. ಅಲ್ಲದೆ, ಜಯಂತನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾಳ...