ಭಾರತ, ಮಾರ್ಚ್ 16 -- ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ನಿವೃತ್ತಿಯಾಗುತ್ತಾರೆ ಎಂದು ವದಂತಿ ಹಬ್ಬಿತ್ತು. ಅವತ್ತೇ ತನ್ನ ನಿವೃತ್ತಿ ನಿರ್ಧಾರದ ಕುರಿತು ಪರೋಕ್ಷವಾಗಿ ಮೌನ ಮುರಿದಿದ್ದರು. ಆದರೀಗ ನೇರವಾಗಿ ತನ್ನ ರಿಟೈರ್​ಮೆಂಟ್ ಬಗ್ಗೆ ತುಟಿಬಿಚ್ಚಿದ್ದಾರೆ. ಭಯಪಡಬೇಡಿ, ನಾನು ಯಾವುದೇ ಘೋಷಣೆ ಮಾಡಲ್ಲ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ. ನಾನು ಆಟವನ್ನು ಆನಂದಿಸುತ್ತಿದ್ದೇನೆ, ನಿವೃತ್ತಿ ಎಂಬುದು ಸದ್ಯಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ದುಬೈನಲ್ಲಿ ಇತ್ತೀಚೆಗೆ ನಡೆದ ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಹ್ಲಿ ಅವರು ಆರ್​ಸಿಬಿ ಇನ್ನೋವೇಶನ್ ಲ್ಯಾಬ್​ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದರು. 'ಭಯಪಡಬೇಡಿ. ನಾನು ಯಾವುದೇ ಘೋಷಣೆ (ನಿವೃತ್ತಿ) ಮಾಡುತ್ತಿಲ್ಲ. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿದೆ. ನಾನು ಇನ್ನೂ ಆಡಲು ಇಷ್ಟಪಡುತ್ತೇನೆ. ಸಾಧನೆಗಳಿಗಾಗಿ ಅಲ್ಲ, ಆದರೆ ಕ್ರಿಕೆಟನ್ನು ಆನಂದಿಸಲು ಮಾತ್ರ ಆಡುತ್ತಿದ್ದೇನೆ' ಎಂದು ನಿವೃತ್ತಿಯ ಚರ್...