Bengaluru, ಏಪ್ರಿಲ್ 28 -- ಅರ್ಥ: ಯಾವ ವ್ಯಕ್ತಿಯಿಂದ ಯಾರೂ ಉದ್ವೇಗವನ್ನು ಪಡುವುದಿಲ್ಲವೋ, ಮತ್ತು ಆ ವ್ಯಕ್ತಿಯು ಯಾರಿಂದಲೂ ಉದ್ವೇಗವನ್ನು ಅನುಭವಿಸುವುದಿಲ್ಲವೋ, ಸುಖ ಮತ್ತು ದುಃಖಗಳಲ್ಲಿ ಭಯ ಮತ್ತು ಆತಂಕಗಳಲ್ಲಿ ಸಮಚಿತ್ತನಾಗಿರುತ್ತಾನೋ ಆತನು ನನಗೆ ಬಹು ಪ್ರಿಯನಾಗುತ್ತಾನೆ.

ಭಾವಾರ್ಥ: ಭಕ್ತನ ಇನ್ನೂ ಕೆಲವು ಅರ್ಹತೆಗಳನ್ನು ಇಲ್ಲಿ ವರ್ಣಿಸಿದೆ. ಇಂತಹ ಭಕ್ತನಿಂದ ಯಾರಿಗೂ ಕಷ್ಟ, ಆತಂಕ, ಭಯ ಅಥವಾ ಅತೃಪ್ತಿ ಉಂಟಾಗುವುದಿಲ್ಲ. ಭಕ್ತನು ಎಲ್ಲರ ವಿಷಯದಲ್ಲಿಯೂ ದಯೆಯಿಂದ ನಡೆದುಕೊಳ್ಳುವುದರಿಂದ ಇತರರಿಗೆ ಆತಂಕವನ್ನುಂಟುಮಾಡುವಂತೆ ಅವನು ನಡೆದುಕೊಳ್ಳುವುದಿಲ್ಲ. ಆದರೆ ಇತರರು ಭಕ್ತನಿಗೆ ಆತಂಕವನ್ನುಂಟುಮಾಡಲು ಯತ್ನಿಸಿದರೆ ಆತನು ಕ್ಷೋಭೆಗೆ ಒಳಗಾಗುವುದಿಲ್ಲ. ಹೊರಗಿನ ಯಾವುದೇ ಶೋಭೆಯಿಂದ ಅವನು ಪ್ರಕ್ಷುಬ್ಧನಾಗದಿರುವಂತೆ ಸಾಧನೆ ಮಾಡಿರುವುದಕ್ಕೆ ಪ್ರಭುವಿನ ಕೃಪೆಯೇ ಕಾರಣ. ವಾಸ್ತವವಾಗಿ, ಭಕ್ತನು ಸದಾ ಕೃಷ್ಣಪ್ರಜ್ಞೆಯಲ್ಲಿ ತನ್ಮಯನಾಗಿದ್ದು ಭಕ್ತಿಸೇವೆಯಲ್ಲಿ ನಿರತನಾಗಿರುವುದರಿಂದ ಇಂತಹ ಐಹಿಕ ಸನ್ನಿವೇಶಗಳಿಂದ ಅವನ ಮನಸ್ಸು...