Bengaluru, ಮೇ 16 -- ಅರ್ಥ: ಪರಮಾತ್ಮನು ಎಲ್ಲ ಇಂದ್ರಿಯಗಳ ಆದಿಮೂಲ, ಆದರೂ ಆತನಿಗೆ ಇಂದ್ರಿಯಗಳಿಲ್ಲ. ಆತನು ಎಲ್ಲ ಜೀವರಾಶಿಯನ್ನು ಪಾಲಿಸುವವನಾದರೂ ನಿರಾಸಕ್ತನು. ಆತನು ನಿಸರ್ಗದ ಗುಣಗಳನ್ನು ಮೀರಿದವನು, ಅದೇ ಕಾಲದಲ್ಲಿ ನಿಸರ್ಗದ ಎಲ್ಲ ಗುಣಗಳ ಪ್ರಭು.

ಭಾವಾರ್ಥ: ಅಧ್ಯಾತ್ಮಿಕ ಪರಮಾತ್ಮನು ಜೀವಿಗಳ ಎಲ್ಲ ಇಂದ್ರಿಯಗಳ ಮೂಲನಾದರೂ ಅವರಿಗಿರುವಂತೆ ಅವನಿಗೆ ಭೌತಿಕ ಇಂದ್ರಿಯಗಳಿಲ್ಲ. ವಾಸ್ತವವಾಗಿ ವ್ಯಕ್ತಿಗತ ಆತ್ಮಗಳಿಗೆ ಆಧ್ಯಾತ್ಮಿಕ ಇಂದ್ರಿಯಗಳುಂಟು, ಆದರೆ ಬದ್ದ ಜೀವನದಲ್ಲಿ ಐಹಿಕ ಘಟಕಾಂಶಗಳು ಅವನ್ನು ಮರೆಮಾಡಿರುತ್ತವೆ. ಆದುದರಿಂದ ಇಂದ್ರಿಯಗಳ ಚಟುವಟಿಕೆಗಳು ಜಡವಸ್ತುವಿನ ಮೂಲಕ ಪ್ರಕಟವಾಗುತ್ತವೆ. ಪರಮ ಪ್ರಭುವಿನ ಇಂದ್ರಿಯಗಳಿಗೆ ಈ ಬಗೆಯ ಮರೆಯಿಲ್ಲ. ಅವನ ಇಂದ್ರಿಯಗಳು ಅಲೌಕಿಕವಾದುವು, ಆದುದರಿಂದ ಅವನ್ನು ನಿರ್ಗುಣ ಎಂದು ಕರೆಯಲಾಗಿದೆ. ಗುಣ ಎಂದರೆ ಐಹಿಕ ಗುಣಗಳು. ಆದರೆ ಅವನ ಇಂದ್ರಿಯಗಳಿಗೆ ಐಹಿಕ ಆಚ್ಛಾದನೆಯಿಲ್ಲ. ಅವನ ಇಂದ್ರಿಯಗಳು ನಮ್ಮ ಇಂದ್ರಿಯಗಳಂತೆಯೇ ಇಲ್ಲ ಎಂದು ಅರ್ಥಮಾಡಿಕೊಳ್ಳಬೇಕು.

ನಮ್ಮ ಇಂದ್ರಿಯಗಳ ಎ...