ಭಾರತ, ಜನವರಿ 29 -- ಯಾರು ಭಕ್ತಿಯಿಂದ ಕರ್ಮವನ್ನು ಮಾಡುವನೋ, ಶುದ್ಧಆತ್ಮನೋ ಮತ್ತು ಮನಸ್ಸನ್ನೂ ಇಂದ್ರಿಯಗಳನ್ನೂ ನಿಯಂತ್ರಿಸುವನೋ ಅವನು ಎಲ್ಲರಿಗೂ ಪ್ರಿಯನಾದವನು ಮತ್ತು ಅವನಿಗೆ ಎಲ್ಲರೂ ಪ್ರಿಯರಾದವರು. ಅವನು ಕರ್ಮವನ್ನು ಮಾಡುತ್ತಿದ್ದರೂ ಅವುಗಳಲ್ಲಿ ಸಿಲುಕಿಕೊಳ್ಳುವುದಿಲ್ಲ.

ಕೃಷ್ಣಪ್ರಜ್ಞೆಯಿಂದ ಮುಕ್ತಿಮಾರ್ಗದಲ್ಲಿರುವವನು ಎಲ್ಲ ಜೀವಿಗಳಿಗೂ ಪ್ರಿಯನಾದವನು ಮತ್ತು ಎಲ್ಲ ಜೀವಿಗಳೂ ಅವನಿಗೆ ಪ್ರಿಯರು. ಇದಕ್ಕೆ ಅವನ ಕೃಷ್ಣಪ್ರಜ್ಞೆಯೇ ಕಾರಣ. ಮರದ ಎಲೆಗಳೂ ಮತ್ತು ಕೊಂಬೆಗಳೂ ಹೇಗೆ ಮರದಿಂದ ಬೇರೆಯಲ್ಲವೋ ಹಾಗೆ ಕೃಷ್ಣಪ್ರಜ್ಞೆಯಲ್ಲಿರುವವನಿಗೆ ಯಾವಜೀವಿಯೂ ಕೃಷ್ಣನಿಂದ ಬೇರೆಯಲ್ಲ. ಮರದ ಬೇರಿಗೆ ನೀರನ್ನೆರೆದರೆ ಎಲ್ಲ ಎಲೆಗಳಿಗೂ ಕೊಂಬೆಗಳಿಗೂ ನೀರು ದೊರೆಯುತ್ತದೆ ಅಥವಾ ಹೊಟ್ಟೆಗೆ ಆಹಾರವನ್ನು ನೀಡಿದರೆ ಚೈತನ್ಯವು ತಂತಾನೇ ದೇಹಕ್ಕೆಲ್ಲ ಲಭ್ಯವಾಗುತ್ತದೆ ಎಂದು ಅವನಿಗೆ ಚೆನ್ನಾಗಿ ಗೊತ್ತು.

ಕೃಷ್ಣಪ್ರಜ್ಞೆಯಲ್ಲಿ ಕೆಲಸಮಾಡುವವನು ಎಲ್ಲರಿಗೂ ಸೇವಕನಾದದ್ದರಿಂದ ಎಲ್ಲರಿಗೂ ಅವನಲ್ಲಿ ಬಹುಪ್ರೀತಿ. ಪ್ರತಿಯೊಬ್ಬರಿಗೂ ಅವ...