ಭಾರತ, ಫೆಬ್ರವರಿ 15 -- ಅರ್ಥ: ಸದಾ ನನ್ನ ಕೀರ್ತನೆಯನ್ನು ಮಾಡುತ್ತ, ದೃಢ ಸಂಕಲ್ಪದಿಂದ ಪ್ರಯತ್ನವನ್ನು ಮಾಡುತ್ತ, ನನಗೆ ನಮಸ್ಕಾರವನ್ನು ಮಾಡುತ್ತ ಈ ಮಹಾತ್ಮರು ಸತತವಾಗಿ ಭಕ್ತಿಯಿಂದ ನನ್ನನ್ನು ಪೂಜಿಸುತ್ತಾರೆ.

ಭಾವಾರ್ಥ: ಪರಮಾತ್ಮನ ಪರಮ ಭಕ್ತನಾದ ಮಹಾತ್ಮನು ದೇವೋತ್ತಮ ಪುರುಷನಾದ ಪರಮ ಪ್ರಭು ಕೃಷ್ಣನ ಕೀರ್ತನೆಯಲ್ಲಿ ಸದಾ ನಿರತನಾಗಿರುತ್ತಾನೆ. ಅವನಿಗೆ ಬೇರೆ ಕೆಲಸವೇ ಇಲ್ಲ. ಅವನು ಸದಾ ದೇವರನ್ನು ಸ್ತುತಿಸುವುದರಲ್ಲಿಯೇ ನಿರತನಾಗಿರುತ್ತಾನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆತನು ನಿರಾಕಾರವಾದಿಯಲ್ಲ. ಕೀರ್ತನೆಯ ಪ್ರಶ್ನೆ ಇರುವಾಗ, ಪರಮ ಪ್ರಭುವನ್ನು ಕೀರ್ತಿಸಬೇಕು. ಅವನ ಪವಿತ್ರ ನಾಮವನ್ನೂ, ನಿತ್ಯ ರೂಪವನ್ನೂ, ದಿವ್ಯ ಗುಣಗಳನ್ನೂ, ಅಸಾಧಾರಣ ಲೀಲೆಗಳನ್ನೂ ಹೊಗಳಬೇಕು. ಇವೆಲ್ಲವನ್ನೂ ಸ್ತುತಿಸಬೇಕು. ಆದುದರಿಂದ ಮಹಾತ್ಮನಾದವನಿಗೆ ದೇವೋತ್ತಮ ಪರಮ ಪುರುಷನಲ್ಲಿ ಮಾತ್ರ ಆಸಕ್ತಿಯಿರುತ್ತದೆ.

ಪರಮಾತ್ಮನ ನಿರಾಕಾರಸ್ವರೂಪವಾದ ಬ್ರಹ್ಮ ಜ್ಯೋತಿಯಲ್ಲಿ ಆಸಕ್ತನಾದವನನ್ನು ಭಗವದ್ಗೀತೆಯಲ್ಲಿ ಮಹಾತ್ಮನೆಂದು ವರ್ಣಿಸಿಲ್ಲ. ಶ್...