ಭಾರತ, ಏಪ್ರಿಲ್ 6 -- ಸೀರೆ, ಭಾರತೀಯ ಮಹಿಳೆಯರ ಅವಿಭಾಜ್ಯ ಅಂಗವಾಗಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಹೆಣ್ತನದ ಸಂಕೇತವೂ ಹೌದು. ದೈನಂದಿನ ಉಡುಗೆಯಿಂದ ಹಿಡಿದು ವಿಶೇಷ ಸಂದರ್ಭಗಳಲ್ಲಿ ಧರಿಸಲು ಸೀರೆ ಧರಿಸಲು ಸೂಕ್ತವಾಗಿದೆ. ಆದರೆ ಸೀರೆಯ ಅಂದ ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸುವುದು ಬ್ಲೌಸ್ ಪೀಸ್.

ಹೌದು, ಬ್ಲೌಸ್​ ಪೀಸ್ ಸೊಗಸಾಗಿ ಮತ್ತು ವಿವಿಧ ವಿನ್ಯಾಸಗಳಲ್ಲಿ ಹೊಲಿಸಿದಷ್ಟೂ ಸೀರೆಯ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಸರಿಯಾದ ವಿನ್ಯಾಸ ಆಯ್ಕೆ ಮಾಡುವುದೂ ಬಹಳ ಮುಖ್ಯವಾಗಿದೆ. ಆದರೆ, ಕೆಲವರಿಗೆ ಇದು ಸವಾಲಿನದ್ದಾಗಿದೆ. ನಿಮಗೆ ಸಹಾಯಲೆಂದೇ ನಾವು ಕೆಲವು ಅಲಂಕಾರಿಕ ಬ್ಲೌಸ್ ಡಿಸೈನ್ ಮಾದರಿ ತಂದಿದ್ದೇವೆ.

ರವಿಕೆ ಹಿಂಭಾಗದಲ್ಲಿ ಮಾಡಿದ ಈ ಕ್ರಿಸ್ ಕ್ರಾಸ್ ಆಕಾರದ ಮಾದರಿ ತುಂಬಾ ಆಕರ್ಷಣೀಯವಾಗಿದೆ. ಇದು ತುಂಬಾ ಸ್ಟೈಲಿಶ್​​ ಆಗಿಯೂ ಕಾಣುತ್ತದೆ. ಜೊತೆಗೆ ನಿಮ್ಮ ಸೀರೆಗೆ ಆಧುನಿಕ ಸ್ಪರ್ಶ ನೀಡುತ್ತದೆ. ಈ ಲುಕ್ ಪಾರ್ಟಿವೇರ್ ಸೀರೆಗಳಿಗೆ ಬೆಸ್ಟ್

ವಿಭಿನ್ನ ಡಿಸೈನರ್ ಲುಕ್ ಹೊಂದಿರುವ ಬ್ಲೌಸ್ ಪೀಸ್ ಹೊಲಿಯಲು ಬಯಸ...