Bengaluru, ಏಪ್ರಿಲ್ 29 -- ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಮಾನಸಿಕ ಖಿನ್ನತೆಯಿಂದ ಬಳಳುತ್ತಿರುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇದೆ. ಅದರಲ್ಲೂ ಮರೆವಿನ ಸಮಸ್ಯೆ ಹದಿಹರೆಯದವರನ್ನೂ ಇನ್ನಿಲ್ಲದಂತೆ ಕಾಡುತ್ತಿದೆ. ನಿಮಗೂ ಎಂದಾದರೂ ಮಾನಸಿಕವಾಗಿ ದಣಿದಿರುವಂತೆ ಅನಿಸಿದ್ದಿದೆಯಾ? ಏಕಾಗ್ರತೆ ಸಾಧಿಸಲು ಅಸಮರ್ಥರಾದ ಅನುಭವವಾಗಿದೆಯಾ? ಅಥವಾ ನಾನಾ ಗೊಂದಲಗಳು ಸರಿಯಾದ ನಿರ್ಧಾರ ಮಾಡುವುದನ್ನು ತಡೆದಿದೆಯಾ? ಇದನ್ನೇ ತಜ್ಞರು ಬ್ರೈನ್ ಫಾಗ್ ಅಥವಾ ಮೆದುಳಿನ ಮಂಜು ಎಂದು ವಿವರಿಸುತ್ತಾರೆ. ಸ್ವತಃ ವೈದ್ಯಕೀಯ ರೋಗನಿರ್ಣಯವಲ್ಲದಿದ್ದರೂ, ಮೆದುಳಿನ ಮಂಜು ನಿಮ್ಮ ದೇಹ ಅಥವಾ ಮನಸ್ಸು ಸಮತೋಲನವನ್ನು ಕಳೆದುಕೊಂಡಿದೆ ಎಂಬುದರ ಸಂಕೇತವಾಗಿರಬಹುದು. ಇದು ಸರಿಯಾದ ನಿದ್ರೆ ಇಲ್ಲದಿರುವುದು, ಒತ್ತಡ, ಪೌಷ್ಠಿಕಾಂಶದ ಕೊರತೆಗಳು ಅಥವಾ ಅತಿಯಾದ ಸ್ಕ್ರೀನ್ ಬಳಕೆಯಿಂದ ಉಂಟಾಗಬಹುದು. ಹಾಗಾದರೆ ಇದಕ್ಕೆ ಪರಿಹಾರ ಏನು? ಸರಿಯಾದ ಜೀವನಶೈಲಿ ಬದಲಾವಣೆಗಳು ಮತ್ತು ಜಾಗೃತಿಯೊಂದಿಗೆ, ನೀವು ಇದರಿಂದ ಹೊರ ಬರಬಹುದು. ಮಾನಸಿಕ ತೀಕ್ಷ್ಣತೆ ಮತ್ತು ಶಕ್ತಿಯನ್...