ಭಾರತ, ಏಪ್ರಿಲ್ 28 -- ಭಾರತದ ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ಮತ್ತು ದಿಗ್ಗಜ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್​ ಲವ್​ನಲ್ಲಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಆದರೆ ಸಂದರ್ಶನವೊಂದರಲ್ಲಿ ಗಿಲ್ ಇರಬಹುದು ಅಥವಾ ಇಲ್ಲದೇ ಇರಬಹುದು ಎಂದು ಹೇಳುವ ಮೂಲಕ ತಲೆಗೆ ಹುಳ ಬಿಟ್ಟಿದ್ದರು. ಒಂದರ್ಥದಲ್ಲಿ ಇಬ್ಬರು ಡೇಟಿಂಗ್ ನಡೆಸುತ್ತಿರುವ ಕುರಿತು ಪರೋಕ್ಷ ಸುಳಿವು ಕೊಟ್ಟಿದ್ದರು. ಇದರ ಜೊತೆಗೆ ಗಿಲ್ ಜೊತೆಗೆ ಸಚಿನ್ ಪುತ್ರಿ ಸಾರಾ ಅಲ್ಲ, ನಟಿ ಸಾರಾ ಅಲಿ ಖಾನ್ ಡೇಟಿಂಗ್ ಮಾಡ್ತಿರೋದು ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಕೆಲವು ವರದಿಗಳು ಹೇಳಿದ್ದವು.

ಶುಭ್ಮನ್ ಗಿಲ್ ಅವರ ವೈಯಕ್ತಿಕ ಜೀವನ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸದಿದ್ದರೂ, ಇನ್​ಸ್ಟಾಗ್ರಾಮ್​ನಲ್ಲಿ ಪರಸ್ಪರ ಫಾಲೋ ಮಾಡಿ ಪೋಸ್ಟ್​ಗಳಿಗೆ ಕಾಮೆಂಟ್​ ಹಾಕುತ್ತಿದ್ದ ಶುಭ್ಮನ್ ಮತ್ತು ಸಾರಾ ಇದೀಗ ದಿಢೀರ್ ...