ಭಾರತ, ಜನವರಿ 28 -- ಸುಂದರವಾಗಿ ಕಾಣಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ನಾನಾ ಮಾರ್ಗ ಕಂಡುಕೊಳ್ಳುತ್ತಾರೆ. ಆದರೆ ಮಾಲಿನ್ಯ ಮತ್ತು ಅಪೌಷ್ಟಿಕತೆಯ ಕಾರಣದಿಂದಾಗಿ ಮುಖದ ಕಾಂತಿ ಕಳೆದು ಹೋಗಬಹುದು. ಮುಖದ ಕೆಲವು ಭಾಗದಲ್ಲಿ ಮಸುಕಾಗಿ ಮತ್ತು ಕೆಲವು ಭಾಗದಲ್ಲಿ ಕಪ್ಪು ಕಲೆಗಳು ಉಂಟಾಗಬಹುದು. ಚರ್ಮದ ಬಣ್ಣ ಅಲ್ಲಲ್ಲಿ ಒಂದೊಂದು ರೀತಿ ಇರುವುದರಿಂದ ಮುಖದ ಅಂದ ಕೆಡುತ್ತದೆ. ಮುಖದ ಚರ್ಮ ಸಂಪೂರ್ಣ ಒಂದೇ ರೀತಿ ಇದ್ದರೆ ಮಾತ್ರ ಅಂದವಾಗಿ ಕಾಣಲು ಸಾಧ್ಯವಿದೆ.

ಈ ಸಮಸ್ಯೆಯನ್ನು ಹೋಗಲಾಡಿಸಲು ಚರ್ಮದ ಮೇಲೆ ಕಲೆಗಳನ್ನು ನಿವಾರಿಸಿ, ತ್ವಚೆಯ ಬಣ್ಣ ಒಂದೇ ರೀತಿ ಕಾಣುವಂತೆ ಮಾಡಲು ಬ್ಯೂಟಿಪಾರ್ಲರ್‌ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕು ಅಂತಿಲ್ಲ, ಅದಕ್ಕಾಗಿ ದುಬಾರಿ ಕ್ರೀಮ್‌ಗಳ ಬಳಕೆಯೂ ಬೇಕಿಲ್ಲ. ಬದಲಾಗಿ ಮನೆಯಲ್ಲೇ ಈ ಕೆಲವು ವಸ್ತುಗಳನ್ನು ಬಳಸಿ ಫೇಸ್‌ಪ್ಯಾಕ್‌ ತಯಾರಿಸಿ ಬಳಸಿ ನೋಡಿ. ಇದರಿಂದ ತ್ವಚೆಯ ಕಾಂತಿ ದುಪ್ಪಟ್ಟಾಗುವುದು ಸುಳ್ಳಲ್ಲ.

ಇದನ್ನೂ ಓದಿ: ಕಲೆಗಳಿಲ್ಲದ ಸುಂದರ ತ್ವಚೆಗೆ ಅಕ್ಕಿಹಿಟ್ಟಿನೊಂದಿಗೆ ಈ ವ...