ಭಾರತ, ಫೆಬ್ರವರಿ 6 -- ChatGPT, DeepSeek Ban: ಚೀನಾ ಮೂಲದ ಆರ್ಟಿಫಿ‍ಷಿಯಲ್ ಟೂಲ್ ಡೀಪ್‌ಸೀಕ್‌ ವಿಶ್ವದೆಲ್ಲೆಡೆ ಜನಪ್ರಿಯವಾಗುತ್ತಿದೆ. ಕಳೆದ ತಿಂಗಳು ಇದು ಶುರುವಾದ ಬಳಿಕ ಅನೇಕರು ಇದನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಲಾರಂಭಿಸಿದ್ದಾರೆ. ಇದು ಜನಪ್ರಿಯತೆ ಹಾಗೂ ಬಳಕೆ ದೃಷ್ಟಿಯಿಂದ ಚಾಟ್‌ಜಿಪಿಟಿಯನ್ನು ಹಿಂದಿಕ್ಕುವ ಸಾಧ್ಯತೆ ಗೋಚರಿಸಿದೆ. ಆದಾಗ್ಯೂ, ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳು ಚೀನಾದ ಈ ಕಂಪನಿ ಬಗ್ಗೆ ವಿಶ್ವಾಸ ಹೊಂದಿಲ್ಲ. ಹೀಗಾಗಿ, ಡೀಪ್‌ಸೀಕ್ ಮತ್ತು ಚಾಟ್‌ಜಿಪಿಟಿ ಬಳಕೆ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಭಾರತ ಸರ್ಕಾರ ಕೂಡ ನಿನ್ನೆ ಈ ಬಗ್ಗೆ ಎಚ್ಚರಿಕೆ ನೀಡಿದೆ. ಚಾಟ್‌ಜಿಪಿಟಿ ಮತ್ತು ಡೀಪ್‌ಸೀಕ್ (ChatGPT, DeepSeek) ಬಳಸಬೇಡಿ ಎಂದು ಕೇಂದ್ರ ಹಣಕಾಸು ಸಚಿವಾಲಯವು ತನ್ನ ಸಿಬ್ಬಂದಿಗೆ ತಾಕೀತು ಮಾಡಿದೆ.

ಕಚೇರಿ ಕಂಪ್ಯೂಟರ್‌, ಮೊಬೈಲ್‌ಗಳಲ್ಲಿ ಎಐ ಅಪ್ಲಿಕೇಶನ್ ಮತ್ತು ಎಐ ಟೂಲ್‌ಗಳನ್ನು ಡೌನ್‌ಲೋಡ್ ಮಾಡುವುದಾಗಲೀ, ಬಳಸುವುದಾಗಲೀ ಮಾಡಬೇಡಿ. ಇವು ಸರ್ಕಾರಿ ದಾಖಲೆಗಳ ಗೌಪ್ಯತೆ ಬಹಿರಂಗಪಡಿಸುವ ಅಪಾ...