ಭಾರತ, ಏಪ್ರಿಲ್ 10 -- ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ (Lakshya Sen) ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನ (Badminton Asia Championships) ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನಲ್ಲಿಯೇ ಸೋತಿದ್ದಾರೆ. ಅಗ್ರ ಶ್ರೇಯಾಂಕದ ಆಟಗಾರ ಚೀನಾದ ಶಿ ಯು ಕಿ ವಿರುದ್ಧ ನೇರ ಗೇಮ್‌ಗಳ ಸೋಲನುಭವಿಸಿದ್ದಾರೆ.‌ ಇದರೊಂದಿಗೆ ಮೊದಲ ಸುತ್ತಿನಲ್ಲೇ ಪರಾಭವಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಲಕ್ಷ್ಯ ಸೇನ್, ಸುದೀರ್ಘ 53 ನಿಮಿಷಗಳ ಕಾಲ ನಡೆದ ಕಠಿಣ ಪಂದ್ಯದಲ್ಲಿ ರೋಚಕ ಪೈಪೋಟಿ ನೀಡಿದರು. ಆದರೆ, ಉನ್ನತ ಶ್ರೇಯಾಂಕಿತ ಆಟಗಾರನ ವಿರುದ್ಧ 19-21, 15-21 ಅಂತರದಿಂದ ಸೋತರು. ಸೋಲಿನ ನಡುವೆಯೂ ಪ್ರಬಲ ಪೈಪೋಟಿ ನೀಡಿದ ಭಾರತೀಯನ ಪ್ರದರ್ಶನವು ಮನಗೆದ್ದಿತು.

ಸೋಲಿನ ನಡುವೆಯೂ ಸೇನ್ ಕೋರ್ಟ್‌ನಲ್ಲಿ ಅದ್ಭುತ ಕವರೇಜ್ ಪ್ರದರ್ಶಿಸಿದರು. ಚೀನೀ ಆಟಗಾರನ ವಿರುದ್ಧ ದೀರ್ಘ ಕಾಲದ ಆಟದಲ್ಲಿ ತೊಡಗಿಸಿಕೊಂಡರು. ಬಲಿಷ್ಠ ಹೊಡೆತ ಹಾಗೂ ಪರಿಪೂರ್ಣ ಡ್ರಾಪ್ ಶಾಟ್‌ಳಿಂ...