ಭಾರತ, ಫೆಬ್ರವರಿ 27 -- ಗುಜರಾತ್ ಜೈಂಟ್ಸ್ ಬೌಲರ್​​ಗಳ ಅಬ್ಬರದಿಂದ ಹಾಗೂ ತಮ್ಮ ಕಳಪೆ ಬ್ಯಾಟಿಂಗ್ ನಿರ್ವಹಣೆ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಸೋಲಿಗೆ ಶರಣಾಗಿದೆ. ವಡೋದರಾ ಹಂತದಲ್ಲಿ ಸತತ ಎರಡು ಗೆಲುವು ದಾಖಲಿಸಿದ್ದ ಆರ್​ಸಿಬಿ, ಇದೀಗ ತವರು ಮೈದಾನದಲ್ಲಿ ಸತತ 3 ಪಂದ್ಯಗಳಲ್ಲಿ ಸೋತು ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಇದೇ ತಂಡದ ವಿರುದ್ಧ ಸೋಲುಂಡಿದ್ದ ಗುಜರಾತ್ ಜೈಂಟ್ಸ್, ಇದೀಗ 6 ವಿಕೆಟ್​ಗಳಿಂದ ಗೆದ್ದು ಸೇಡು ತೀರಿಸಿಕೊಂಡಿದೆ. ಇದು ಜಿಜಿ ತಂಡದ 2ನೇ ಗೆಲುವಾಗಿದ್ದು, ಸತತ ಸೋಲುಗಳ ಬಳಿಕ ಲಯಕ್ಕೆ ಮರಳಿದೆ. ಇದೇ ಕಳಪೆ ಪ್ರದರ್ಶನ ಮುಂದುವರೆದರೆ ಹಾಲಿ ಚಾಂಪಿಯನ್ ಪ್ಲೇಆಫ್ ಹಾದಿ ಕಠಿಣವಾಗಲಿದೆ. ಉಳಿದ 3 ಪಂದ್ಯ ಗೆದ್ದರಷ್ಟೇ ನಾಕೌಟ್ ಹಂತ ಸುಗಮವಾಗಲಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ತನ್ನ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಡಿಯಾಂಡ್ರಾ ಡಾಟಿನ್ ಮತ್ತು ತನುಜಾ ಕನ್ವರ್ ತ...