ಭಾರತ, ಏಪ್ರಿಲ್ 5 -- ಐಪಿಎಲ್‌ನಲ್ಲಿ ಈ ವಾರಾಂತ್ಯದ ಭಾನುವಾರ ಒಂದು ಪಂದ್ಯ ಮಾತ್ರವೇ ನಡೆಯುತ್ತಿದೆ. ಶನಿವಾರದ ಡಬಲ್‌ ಹೆಡರ್‌ ನಂತರ ನಾಳೆ (ಏಪ್ರಿಲ್‌ 6) ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯವು ಸಂಜೆ 7:30ಕ್ಕೆ ನಡೆಯುತ್ತಿದ್ದು, ಸನ್‌ರೈಸರ್ಸ್‌ ಹೈದರಾಬಾದ್‌ ತವರು ಮೈದಾನ ಹೈದರಾಬಾದ್‌ನ ರಾಜೀವ್‌ ಗಾಂಧಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಗುಜರಾತ್‌ ತಂಡವು ಮೊದಲ ಸೋಲಿನ ನಂತರ ಟೂರ್ನಿಯಲ್ಲಿ ಸತತ ಎರಡು ಗೆಲುವು ಸಾಧಿಸಿದೆ. ಅತ್ತ ಎಸ್‌ಆರ್‌ಎಚ್‌ ತಂಡವು, ಭರ್ಜರಿ ಆರಂಭದ ನಂತರ ಹ್ಯಾಟ್ರಿಕ್‌ ಸೋಲಿನ ಸಂಕಷ್ಟದಲ್ಲಿದೆ. ಮುಂದೆ ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳುವುದು ತಂಡಕ್ಕೆ ಅನಿವಾರ್ಯವಾಗಿದೆ.

ಇದನ್ನೂ ಓದಿ | ರೋಚಕ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ 6 ರನ್‌ ಗೆಲುವು; 2023ರ ಐಪಿಎಲ್ ಪಂದ್ಯ ನೆನಪಿಸಿದ ಸಿಎಸ್‌ಕೆ ಸೋಲು

Published by HT Digital Content Services with permission from HT Kannada....