Koppal, ಫೆಬ್ರವರಿ 3 -- ಕೊಪ್ಪಳ: ತಮ್ಮ ಬ್ಯಾಂಕ್‌ನಿಂದ ತಲಾ . 50,000 ರೂ ಗಳಂತೆ ಎರಡು ಬಾರಿ ಒಂದು ಲಕ್ಷ ರೂ. ಹಣ ಕಡಿತವಾದ ತಕ್ಷಣವೇ ಬ್ಯಾಂಕ್‌ಗೆ ಆಗಮಿಸಿ ದೂರು ನೀಡಿದ ಖಾತೆದಾರರ ಸುರಕ್ಷತೆ ಕಾಪಾಡುವಲ್ಲಿ ವಿಫಲವಾದ ಕೆನರಾ ಬ್ಯಾಂಕ್‌ಗೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಅಲ್ಲದೇ ಅವರು ಕಳೆದುಕೊಂಡು ಒಂದು ಲಕ್ಷ ರೂ. ಹಣವನ್ನು ಬ್ಯಾಂಕ್‌ನಿಂದಲೇ ಪಾವತಿಸಿಕೊಡುವಂತೆಯೂ ಆದೇಶ ನೀಡಿದೆ. ಒಂದೂವರೆ ತಿಂಗಳ ಒಳಗೆ ಹಣ ಕಳೆದುಕೊಂಡ ಗ್ರಾಹಕರಿಗೆ ಪೂರ್ತಿ ಹಣವನ್ನು ಪಾವತಿ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ಬ್ಯಾಂಕ್‌ಗಳಿಂದ ಹಣ ಕಳೆದುಕೊಂಡವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡುವಂತೆಯೂ ಸೂಚಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಅಳವಂಡಿ ಪಟ್ಟಣದ ನಿವಾಸಿಯಾಗಿರುವ ಶಿಕ್ಷಕ ವೀರಣ್ಣ ನಾಗಪ್ಪ ಮಟ್ಟಿ ಎನ್ನುವವರು ತಮ್ಮ ಕೊಪ್ಪಳ ಜಿಲ್ಲೆಯ ಬೆಟಗೇರಿ ಕೆನರಾ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಅವರ ಖಾತೆಯಿಂದ 50,000 ರೂ. ಕಡಿತವಾಗಿತ್ತು. ಈ ಕುರಿತು ಮೊಬೈಲ...