ಭಾರತ, ಫೆಬ್ರವರಿ 7 -- ನವದೆಹಲಿ: ಸೈಬರ್ ಹಣಕಾಸು ವಂಚನೆ ತಡೆಯುವುದಕ್ಕಾಗಿ ಶೀಘ್ರದಲ್ಲೇ ಬ್ಯಾಂಕುಗಳಿಗೆ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ವಿಶೇಷವಾಗಿ ಬ್ಯಾಂಕ್ ಡಾಟ್‌ ಇನ್ ಮತ್ತು ಫಿನ್ ಡಾಟ್ ಇನ್‌ (bank.in, fin.in) ಡೊಮೈನ್‌ಗಳನ್ನು ಒದಗಿಸುವುದಕ್ಕೆ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸಂಜೀವ್ ಮಲ್ಹೋತ್ರಾ ಶುಕ್ರವಾರ (ಫೆ 7) ಘೋಷಿಸಿದರು. ಈ ಪೈಕು ಬ್ಯಾಂಕುಗಳಿಗೆ bank.in ಮತ್ತು ಬ್ಯಾಂಕುಗಳಿಗೆ ಹೊರತಾದ ಹಣಕಾಸು ಸಂಸ್ಥೆಗಳಿಗೆ fin.in ಡೊಮೈನ್ ಒದಗಿಸಲು ಆರ್‌ಬಿಐ ಮುಂದಾಗಿದೆ. ಇದು ಸೈಬರ್ ಹಣಕಾಸು ವಂಚನೆ ತಡೆಯಲು ಮತ್ತು ಆನ್‌ಲೈನ್‌ನಲ್ಲಿ ಹೆಚ್ಚಿನ ಹಣಕಾಸು ಸುರಕ್ಷೆಯನ್ನುಖಾತರಿಪಡಿಸಲು ನೆರವಾಗಲಿದೆ ಎಂದು ಆರ್‌ಬಿಐ ಹೇಳಿದೆ.

ಮಾಹಿತಿ ಅಪ್ಡೇಟ್ ಆಗುತ್ತಿದೆ

Published by HT Digital Content Services with permission from HT Kannada....