Bengaluru, ಏಪ್ರಿಲ್ 7 -- ಇಂದಿನ ವೇಗದ ಜೀವನಶೈಲಿಯಲ್ಲಿ ತೂಕ ಇಳಿಕೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ತೂಕ ಇಳಿಕೆಗೆ ಸೂಕ್ತ ವ್ಯಾಯಾಮದ ಜೊತೆಗೆ ಪೌಷ್ಟಿಕಾಂಶಭರಿತ ಡಯೆಟ್ ಆಹಾರವನ್ನು ಸೇವಿಸುವುದು ಕೂಡ ಬಹಳ ಮುಖ್ಯ. ಆಹಾರಕ್ಕೆ ವಿವಿಧ ಮಸಾಲೆಗಳನ್ನು ಸೇರಿಸುವುದರಿಂದ ನಿಮ್ಮ ತೂಕ ಇಳಿಕೆಯನ್ನು ವೇಗಗೊಳಿಸಬಹುದು. ತೂಕ ಇಳಿಕೆಗೆ ಕಾಳುಮೆಣಸು ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಈ ಮಸಾಲೆ, ಅದರ ವಿಶಿಷ್ಟ ಸುವಾಸನೆಯೊಂದಿಗೆ, ಪೈಪರಿನ್ ಎಂಬ ಪ್ರಬಲ ಅಂಶವನ್ನು ಒಳಗೊಂಡಿದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಕಾಳುಮೆಣಸು ಎಂದರೆ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆ. ಇದನ್ನು ಮಸಾಲೆಗಳ ರಾಜ ಅಂತಲೂ ಕರೆಯುತ್ತಾರೆ. ಮೊದಲೇ ತಿಳಿಸಿದಂತೆ ಇದರಲ್ಲಿ ಪೈಪರಿನ್ ಎನ್ನುವ ಪ್ರಮುಖ ಸಕ್ರಿಯ ಸಂಯುಕ್ತವಿದೆ. ಪೈಪರಿನ್ ದೇಹದ ಜೀರ್ಣಕ್ರಿಯೆ ಹಾಗೂ ಮೆಟಾಬಾಲಿಸಂ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗದಂತೆ ತಡೆಯುವ ಶಕ್ತಿ ಹೊಂದಿದೆ.

ತೂಕ ಇಳಿಕ...