ಭಾರತ, ಏಪ್ರಿಲ್ 27 -- ಬೆಂಗಳೂರು: ಆರು ವಾರಗಳ ಕಾಲ ಬೈಕ್-ಟ್ಯಾಕ್ಸಿ ಕಾರ್ಯಾಚರಣೆ ನಿಲ್ಲಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಇದು ನಗರದ ಸಾವಿರಾರು ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಉಬರ್, ರಾಪಿಡೊ, ಓಲಾ ಮುಂತಾದ ವೇದಿಕೆಗಳೊಂದಿಗೆ ತಮ್ಮ ದ್ವಿಚಕ್ರ ವಾಹನ ಪಾಲುದಾರಿಕೆ ಮಾಡಿಕೊಂಡಿರುವ ಸವಾರರು ತಮ್ಮ ಪ್ರಾಥಮಿಕ ಜೀವನೋಪಾಯದ ಮೂಲ ಕಳೆದುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ. ಅನೇಕ ಯುವಕರಿಗೆ, ಬೈಕ್-ಟ್ಯಾಕ್ಸಿ ಸೇವೆಗಳು ಅವರ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಮತ್ತು ಅವರ ಕುಟುಂಬಗಳನ್ನು ಪೋಷಿಸಲು ಸಹಾಯ ಮಾಡಿವೆ. ಜೊತೆಗೆ ಮೆಟ್ರೋ ಕೊನೆ ಮೈಲಿ ಸಂಪರ್ಕದ ಮೇಲೂ ಪರಿಣಾಮ ಬೀರಲಿದೆ.

ಹೈಕೋರ್ಟ್ ಆದೇಶದಿಂದ ನಮ್ಮ ಮೆಟ್ರೋ ಬಳಸುವ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ತಮ್ಮ ಮನೆಗಳಿಂದ ಮೆಟ್ರೋ ಸಂಪರ್ಕ ಕಲ್ಪಿಸಲು ಬಸ್​ಗಳ ಕೊರತೆಯ ಕಾರಣ ಅಂತಹ ಪ್ರಯಾಣಿಕರು ಬೈಕ್​ ಟ್ಯಾಕ್ಸಿಗಳನ್ನೇ ನೆಚ್ಚಿಕೊಂಡಿದ್ದರು. ಏಕೆಂದರೆ ಬಸ್​ ಸೇವೆಯ ಕೊರತೆ, ಆಟೋ ಚಾಲಕರು ಕರೆದ ಕಡೆಗಲ್ಲ ಬರುವುದಿಲ್ಲ, ಬಂದರೂ ತಮಗೆ ಬಾಯಿಗೆ ಬಂದಂತೆ ಇಷ್ಟೇ...