ಭಾರತ, ಮೇ 15 -- ಬೇಸಿಗೆ ರಜೆಯಲ್ಲಿ ಪ್ರವಾಸ ಪ್ಲಾನ್ ಮಾಡೋದು ಸಹಜ. ಮಕ್ಕಳಂತೂ ಅಮ್ಮ-ಅಪ್ಪನ ಜೊತೆ ಹೊರಗಡೆ ಹೋಗಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಮಕ್ಕಳೊಂದಿಗೆ ಮೋಜು ಮಾಡಲು ಮತ್ತು ಅವರನ್ನು ರೋಮಾಂಚನಗೊಳಿಸಲು ಜಂಗಲ್ ಸಫಾರಿ ಹೇಳಿ ಮಾಡಿಸಿದ್ದು. ಮಕ್ಕಳು ಪ್ರಾಣಿಗಳನ್ನು ಪಕ್ಷಿಗಳನ್ನು ನೋಡಿ ನಕ್ಕು ನಲಿಯುತ್ತಾರೆ. ಅವರಿಗೆ ಇದು ವಿಶೇಷ ಅನುಭವ ಕೊಡುವುದು ಖಂಡಿತ.
ಆದರೆ ಜಂಗಲ್ ಸಫಾರಿ ಮಕ್ಕಳನ್ನು ಕರೆದುಕೊಂಡು ಹೋಗುವ ಮುನ್ನ ಪೋಷಕರು ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಮಕ್ಕಳಲ್ಲಿ ಜಂಗಲ್ ಸಫಾರಿಯ ಖುಷಿ ಹೆಚ್ಚಿಸಲು ಈ ಕೆಲವು ಕ್ರಮಗಳನ್ನು ತಪ್ಪದೇ ಪಾಲಿಸಬೇಕು.
ಜಂಗಲ್ ಸಫಾರಿಗೆ ಹೋಗುವಾಗ ನೀವು ಧರಿಸುವ ಬಟ್ಟೆಗಳ ಬಣ್ಣದ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಕಾಡಿನ ನೆಲ, ಮರಗಳು ಮತ್ತು ಹುಲ್ಲಿನೊಂದಿಗೆ ಬೆರೆಯುವ ನೈಸರ್ಗಿಕ ಬಣ್ಣಗಳ ಬಟ್ಟೆಗಳನ್ನು ಆರಿಸುವುದು ಉತ್ತಮ. ತಿಳಿ ಕಂದು, ಹಸಿರು ಮತ್ತು ಬೂದು ಬಣ್ಣಗಳು ಸೂಕ್ತವಾಗಿವೆ. ಬಿಳಿ, ಕಪ್ಪು, ಗಾಢ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.