ಭಾರತ, ಏಪ್ರಿಲ್ 26 -- ಬೇಸಿಗೆ ಕಾಲದಲ್ಲಿ ನಾಲಿಗೆಗೆ ರುಚಿಯೆನ್ನಿಸಿದ್ದು, ದೇಹಕ್ಕೆ ಹಿತವಾಗೋದಿಲ್ಲ, ದೇಹಕ್ಕೆ ಹಿತವಾದುದು ತಿನ್ನಲು ಮನಸ್ಸಾಗೋದಿಲ್ಲ ಎಂಬಂತಹ ಪರಿಸ್ಥಿತಿ ಇರುತ್ತದೆ. ಆದರೆ ದೇಹಕ್ಕೂ ಹಿತವಾದ, ನಾಲಿಗೆಗೆ ರುಚಿಕರವೆನ್ನಿಸುವ ಹಾಲುಬಾಯಿಯನ್ನು ನೀವೆಂದಾದರೂ ತಯಾರಿಸಿ ತಿಂದಿದ್ದೀರಾ? ಹೌದು, ಕರ್ನಾಟಕ ವಿಭಿನ್ನವಾಗಿರುವ ಸಿಹಿ ತಿನಿಸುಗಳಿಗೆ ಹೆಸರುವಾಸಿ. ಅದರಲ್ಲೂ ದಕ್ಷಿಣ ಕನ್ನಡ ಭಾಗದ ಸರಳ ಹಾಗೂ ವಿಶೇಷವಾಗಿರುವ ಹಾಲುಬಾಯಿಗಳನ್ನಂತೂ ಮಕ್ಕಳಿಂದ ತೊಡಗಿ ವಯಸ್ಸಾದವರೂ ಸಹ ಇಷ್ಟಪಟ್ಟು ತಿನ್ನುತ್ತಾರೆ. ದೇಹದ ಉಷ್ಣತೆಯನ್ನು ಸರಿದೂಗಿಸುವಲ್ಲಿ ಹಾಲುಬಾಯಿ ಸಹಕರಿಸುತ್ತದೆ. ವಿಭಿನ್ನ ಹಾಲುಬಾಯಿಗಳನ್ನು ತಯಾರಿಸುವ ಪಾಕವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ತೆಂಗಿನಕಾಯಿ 1, ಅರ್ಧ ಕೆಜಿ ಅಕ್ಕಿ, ಅರ್ಧ ಕೆಜಿ ಬೆಲ್ಲ, ಚಿಟಿಕೆ ಉಪ್ಪು, ತುಪ್ಪ.

ಅಕ್ಕಿ ಹಾಲುಬಾಯಿ ಮಾಡುವ ವಿಧಾನ: ತೆಂಗಿನತುರಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದಕ್ಕೆ ಎರಡು ಗಂಟೆಗಳ ಕಾಲ ನೆನೆ ಹಾಕಿಟ್ಟ ಅಕ್ಕಿ ಹಾಗೂ ಅರ್ಧ ಕೆಜಿ ಬೆಲ್ಲ...