ಭಾರತ, ಏಪ್ರಿಲ್ 29 -- ಒಟಿಟಿ ವೇದಿಕೆ ಅನ್ನೋದು ಮನೆಯಲ್ಲೇ ನಮಗೆ ವಿವಿಧ ಪ್ರಕಾರದ ಸಿನಿಮಾಗಳನ್ನು ನೋಡಲು ಅವಕಾಶ ಮಾಡಿಕೊಡುತ್ತಿದೆ. ಒಟಿಟಿಯಲ್ಲಿ ಸಾಕಷ್ಟು ಮಕ್ಕಳ ಚಿತ್ರಗಳು ಕೂಡ ಲಭ್ಯವಿವೆ. ಬೇಸಿಗೆ ರಜಾದಿನಗಳಲ್ಲಿ ನಿಮ್ಮ ಮಕ್ಕಳಿಗೆ ಭಾರತೀಯ ಪುರಾಣ ಮತ್ತು ದಂತಕಥೆಗಳ ಬಗ್ಗೆ ಕಲಿಸಲು ನೀವು ಬಯಸಿದರೆ ಈ ಕೆಲವು ಆ್ಯನಿಮೇಟೆಡ್ ಚಿತ್ರಗಳನ್ನು ತೋರಿಸಬಹುದು. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋಹಾಟ್‌ಸ್ಟಾರ್ ಮತ್ತು ಯೂಟ್ಯೂಬ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿರುವ ಕೆಲವು ಪ್ರಸಿದ್ಧ ಮಕ್ಕಳ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಗಣಪತಿ ಮಕ್ಕಳಿಗೆ ತುಂಬಾ ಪ್ರಿಯವಾದ ದೇವರು. ಅಂತಹ ದೇವರ ಮಹಿಮೆಗಳನ್ನು ಮತ್ತು ಅವನ ಸಾಹಸಗಳನ್ನು ಅನಿಮೇಷನ್ ರೂಪದಲ್ಲಿ ತರುವ ಸಿನಿಮಾ 'ಬಾಲ್ ಗಣೇಶ್'. ನೀವು ಅದನ್ನು ಪ್ರೈಮ್ ವಿಡಿಯೊದಲ್ಲಿ ವೀಕ್ಷಿಸಬಹುದು. ಜಿಯೊ ಹಾಟ್‌ಸ್ಟಾರ್‌ನಲ್ಲೂ ಈ ಸಿನಿಮಾ ಲಭ್ಯವಿದೆ.

ನಮ್ಮ ದೇಶದ ಪ್ರಮುಖ ಮಹಾಕಾವ್ಯಗಳಲ್ಲಿ ಒಂದು ಮಹಾಭಾರತ. ಇದನ್ನು 2013 ರಲ್ಲಿ ಮಹಾಭಾರತ ಎಂಬ ಅನಿಮೇಟೆಡ್ ಚಲನ...