Bangalore, ಏಪ್ರಿಲ್ 18 -- ಬೇಸಿಗೆ ರಜೆಯ ನಡುವೆ ಸಾಲು ಸಾಲು ವಾರಾಂತ್ಯ ರಜೆ. ಇದರಿಂದ ಎಲ್ಲಿ ನೋಡಿದರೂ ಜನವೋ ಜನ. ಪ್ರವಾಸಿಗರಿಂದ ಎಲ್ಲಾ ಪ್ರವಾಸಿ ತಾಣ, ಊರುಗಳು ತುಂಬಿವೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಈ ಬಾರಿ ರಜೆಯಲ್ಲಿ ಕಂಡು ಬಂದಿರುವ ಸಂಚಾರ ದಟ್ಟಣೆಯಂತೂ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ. ರಜೆಗಳು ಬಂದರೆ ಜನ ಊರುಗಳಿಗೆ ತೆರಳಿ ಬೆಂಗಳೂರಿನ ರಸ್ತೆಗಳು ಸಂಚಾರ ದಟ್ಟಣೆಯಿಂದ ಕೊಂಚವಾದರೂ ಮುಕ್ತವಾಗುತ್ತವೆ ಎನ್ನುವ ನಂಬಿಕೆ. ಆದರೆ ಈ ಬಾರಿ ಹಾಗಿಲ್ಲ. ರಜೆ ಇರುವ ಕಾರಣದಿಂದ ಬೆಂಗಳೂರಿನತ್ತಲೇ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಗುರುವಾರದಿಂದಲೇ ಜನ ಬೆಂಗಳೂರಿನತ್ತ ಆಗಮಿಸುವುದು ಸಾಮಾನ್ಯವಾಗಿದೆ. ಗುರುವಾರ ರಾತ್ರಿ ಹಲವು ಕಡೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ ಈ ರೀತಿಯ ಸಂಚಾರ ದಟ್ಟಣೆಯ ಫೋಟೋ ಒಂದು ಭಾರೀ ವೈರಲ್‌ ಆಗಿದೆ.

ಬೆಂಗಳೂರಿನ ಎಸ್.‌ಕಿರಣ್‌ಕುಮಾರ್‌ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದಾರೆ. ಅದು ಕಿ.ಮಿ. ಉದ್ದದಲ್ಲಿ ನಿಂತಿರುವ ವಾಹನಗಳು, ಫ್ಲೈಓವರ್‌, ಬೆ...