Bengaluru, ಏಪ್ರಿಲ್ 14 -- ಮಕ್ಕಳಿಗೆ ಈಗಾಗಲೇ ಬೇಸಿಗೆ ರಜೆ ಶುರುವಾಗಿದೆ. ಹೀಗಾಗಿ ಈ ಬೇಸಿಗೆ ರಜೆಗೆ ಎಲ್ಲಾದರೂ ಪ್ರವಾಸಕ್ಕೆ ಹೋಗೋಣ ಎಂದು ಬಹುತೇಕರು ಯೋಜಿಸುವುದು ಸಾಮಾನ್ಯ. ಬೇಸಿಗೆಯ ತಾಪಮಾನದಿಂದ ಬಳಲಿ ಬೆಂಡಾಗಿದ್ದರೆ ನೀವು ಭೇಟಿ ನೀಡಬಹುದಾದ ಐದು ಅತ್ಯುತ್ತಮ ಸ್ಥಳಗಳಿವೆ. ಯಾವ ತಾಣಗಳಿಗೆ ಭೇಟಿ ನೀಡಬಹುದು, ಇಲ್ಲಿ ತಿಳಿಯೋಣ.

ಕೊಡಗು: ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲ್ಪಡುವ ಕೊಡಗು ತನ್ನ ಸುಂದರವಾದ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಗುಡ್ಡ-ಬೆಟ್ಟಗಳು, ಕಾಫಿ ತೋಟಗಳು, ಉತ್ತಮ ಹವಾಮಾನ ಇತ್ಯಾದಿಯಿಂದಾಗಿ ಕೊಡಗು ಉತ್ತಮ ಪ್ರವಾಸಿ ತಾಣವಾಗಿದೆ. ಸೆಪ್ಟೆಂಬರ್‌ನಿಂದ ಜೂನ್‌ವರೆಗೆ ಕೊಡಗಿಗೆ ಭೇಟಿ ನೀಡಲು ಉತ್ತಮ ಸಮಯ. ಆದರೆ, ಬೇಸಿಗೆಯಲ್ಲಿಯೂ ಭೇಟಿ ನೀಡಲು ಇದು ಸೂಕ್ತವಾಗಿದೆ.

ಕೊಡಗು ಜಿಲ್ಲೆಯ ಅತಿ ಎತ್ತರದ ಶಿಖರವಾದ ತಡಿಯಾಂಡಮೋಲ್‌ನಲ್ಲಿ ಚಾರಣ ಮಾಡಬಹುದು. ಬರಪೋಲೆ ನದಿಯಲ್ಲಿ ರಿವರ್ ರಾಫ್ಟಿಂಗ್, ಸೌಂದರ್ಯ ಮತ್ತು ಧಾರ್ಮಿಕ ಮಹತ್ವ ಹೊಂದಿರುವ ತಲಕಾವೇರಿಗೆ ಭೇಟಿ ನೀಡಬಹುದು. ಅಬ್ಬಿ ಜಲಪಾತದ ಸೌಂದರ್ಯವನ...