Mysuru, ಏಪ್ರಿಲ್ 17 -- ಮೈಸೂರು: ಈ ಬಾರಿ ಮೈಸೂರು, ಕೊಡಗು, ಹಾಸನ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಬೇಸಿಗೆ ಮಳೆಯೂ ಆಗುತ್ತಿದೆ. ಪೂರ್ವ ಮುಂಗಾರು ಮುಂದಿನ ತಿಂಗಳೇ ಆರಂಭವಾಗುವ ಸೂಚನೆಗಳಿವೆ. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಗ್ರಾಹಕರಿಗೆ ಅಡಚಣೆರಹಿತವಾದ ವಿದ್ಯುತ್‌ ಸೇವೆಯನ್ನು ನೀಡುತ್ತಾ ಬಂದಿದೆ. ಬೇಸಿಗೆ ಮಳೆಯ ಜತೆಯಲ್ಲಿ ಪೂರ್ವ ಮುಂಗಾರು ಆರಂಭ ಆಗುತ್ತಿರುವ ಸಂದರ್ಭದಲ್ಲಿ ಉಂಟಾಗುವ ವಿದ್ಯುತ್ ‌ಸಮಸ್ಯೆಗಳು, ಅಪಾಯಗಳ ಕುರಿತಂತೆ ಜಾಗೃತಿ ಮೂಡಿಸಿ, ಎಚ್ಚರವಹಿಸಲು ಕ್ರಮವಹಿಸಲಾಗಿದೆ. ಸೆಸ್ಕ್ ವ್ಯಾಪ್ತಿಯ 5 ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಆರಂಭವಾಗಿ ಅಲ್ಲಲ್ಲಿ ಮಳೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅತಿಯಾದ ಗಾಳಿ ಮತ್ತು ಮಳೆಯಿಂದ ವಿದ್ಯುತ್ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಮಳೆಯಿಂದ ಸಂಭವಿಸಬಹುದಾದ ವಿದ್ಯುತ್‌ ಅವಘಡಗಳು ಹಾಗೂ ತೊಂದರೆಗಳನ್ನು ಎದುರಿಸಲು ಸೆಸ್ಕ್ ಸನ್ನದ್ಧವಾಗಿದೆ. ಈ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೆಸ್ಕ್‌ ಅಧ್ಯಕ್ಷರೂ ಆಗ...