ಭಾರತ, ಏಪ್ರಿಲ್ 28 -- ಬೇಸಿಗೆಗೆ ಸೂರ್ಯನ ಶಾಖ ಮನುಷ್ಟಯರಿಗೆ ವಿಪರೀತ ಹಾನಿ ಮಾಡುವುದಲ್ಲದೆ, ಮನೆಯಲ್ಲಿರುವ ಹೂಗಿಡಗಳ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಸಸ್ಯಗಳನ್ನು ನೋಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಆದರೂ, ಬೇಸಿಗೆಯ ದಿನಗಳಲ್ಲಿ ಸಸ್ಯವನ್ನು ನೋಡಿಕೊಳ್ಳುವ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಮನೆಯಲ್ಲಿಯೇ ಕೆಲವು ತಂತ್ರಗಳನ್ನು ನೀವು ಅನುಸರಿಸಬಹುದು.

ಅಡುಗೆಮನೆಯಲ್ಲಿರುವ 3 ವಸ್ತುಗಳನ್ನು ಬಳಸಿಕೊಂಡು, ಬೇಸಿಗೆಯಲ್ಲಿ ಹೂಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಇವು ಬಿಸಿಲಿನಲ್ಲಿಯೂ ನಿಮ್ಮ ಸಸ್ಯಗಳನ್ನು ಆರೋಗ್ಯಕರವಾಗಿಡಲು ನೆರವಾಗುತ್ತವೆ. ಬೇಸಿಗೆಯಲ್ಲಿ ನಿಮ್ಮ ತೋಟದಲ್ಲಿನ ಸಸ್ಯಗಳನ್ನು ನೋಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ.

ಈರುಳ್ಳಿ ಸಿಪ್ಪೆಯಲ್ಲಿ ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳು ಇರುತ್ತವೆ. ಇದು ಸಸ್ಯಗಳಿಗೆ ಪ್ರಯೋಜನಕಾರಿ. ಬೇಸಿಗೆಯಲ್ಲಿ ನಿಮ್ಮ ಹೂದೋಟವನ್ನು ಹಸಿರಾಗಿಡಲು ನೀವು ಈರುಳ್ಳಿ ಸಿಪ್ಪೆಗಳನ್ನು ಬಳಸಬಹುದು. ಈರುಳ್ಳಿ ಸಿಪ್ಪೆಗಳನ್ನು 4-5 ಗಂಟೆಗಳ ಕಾಲ ನೀ...