ಭಾರತ, ಏಪ್ರಿಲ್ 27 -- ಬೇಸಿಗೆಯಲ್ಲಿ ಜನರು ಬಯಸೋದು ತಂಪಾದ ತಾಣಗಳನ್ನು.‌ ವಾರಾಂತ್ಯ ಅಥವಾ ರಜೆಯ ಸಮಯದಲ್ಲಿ ಕಾಡು-ಮೇಡು, ಗಿರಿಧಾಮಗಳಿಗೆ ಪ್ರವಾಸ ಹೋಗುವುದು ಸಾಮಾನ್ಯ. ಮರಗಿಡಗಳ ನಡುವೆ, ಹಸಿರನ್ನು ಸವಿಯುತ್ತಾ ತಂಪಾಗಿರುವುದು ಮನಸು ಹಾಗೂ ದೇಹಕ್ಕೆ ಖುಷಿ ಕೊಡುತ್ತದೆ. ನಗರ ಭಾಗದಲ್ಲಿರುವವರಿಗೆ ಬೇಸಿಗೆಯ ಬಿಸಿಲಿನ ಶಾಖ ಒಂದೆಡೆಯಾದರೆ, ವಾಯುಗುಣಮಟ್ಟ ಕುಸಿತವಾಗಿರುವುದು ಇನ್ನೊಂದು ಸಮಸ್ಯೆ. ಹೀಗಾಗಿ ಭಾರತದ ಕೆಲವೊಂದು ತಂಪಾದ ಗಿರಿಧಾಮಗಳು, ಘಟ್ಟಪ್ರದೇಶಗಳಿಗೆ ನೀವು ಪ್ರವಾಸ ಮಾಡಬಹುದು. ಪ್ರಕೃತಿ ರಮಣೀಯ ತಾಣಗಳಿಗೆ ಹೆಸರಾದ ಭಾರತದಲ್ಲಿ ನೂರಾರು ಗಿರಿಧಾಮಗಳಿವೆ. ಮಾಲಿನ್ಯದಿಂದ ದೂರ ಬಂದು ಆರೋಗ್ಯಕರ ಪರಿಸರವನ್ನು ಅಲ್ಲಿ ನೀವು ಆನಂದಿಸಬಹುದು.

ಭಾರತದಲ್ಲಿರುವ ಕೆಲವು ಪ್ರಸಿದ್ಧ ಗಿರಿಧಾಮಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯುತ್ತಮವಾಗಿದೆ. ಹೀಗಾಗಿ ಬೇಸಿಗೆ ಸವಿಯಲು ಅಂತಹ ಸ್ಥಳ ಉತ್ತಮ.

ವಾಯು ಗುಣಮಟ್ಟ ಸೂಚ್ಯಂಕ (AQI) ಎನ್ನುವುದು ಗಾಳಿಯ ಗುಣಮಟ್ಟವನ್ನು ವರದಿ ಮಾಡುವ ಒಂದು ವ್ಯವಸ್ಥೆ. ಅಂದರೆ, ನೀವಿರುವ ಸ್...