ಭಾರತ, ಮೇ 4 -- ಕರ್ನಾಟಕದಲ್ಲಿ ಮೇ ತಿಂಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಕೊಡಗು. ಸರ್ವಕಾಲದಲ್ಲೂ ತಂಪಾಗಿರುವ ಕೊಡಗಿಗೆ ಈ ಮೇ ತಿಂಗಳಲ್ಲಿ ನೀವೂ ಕೂಡ ಪ್ರವಾಸ ಮಾಡಬೇಕು ಅಂತಿದ್ದರೆ ಕೆಲವು ಜಾಗಗಳನ್ನು ತಪ್ಪದೇ ನೋಡಬೇಕು. ಕೊಡಗಿನಲ್ಲಿರುವ ಕಾಫಿ ಎಸ್ಟೇಟ್‌ಗಳು, ಜಲಪಾತಗಳ ಜೊತೆಗೆ ಈ ಸ್ಥಳಗಳನ್ನು ತಪ್ಪದೇ ನೋಡಿ ಬನ್ನಿ.

ಪಹಲ್ಗಾಮ್ ದಾಳಿಯ ಬಳಿಕ ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್ಲೆಂಡ್‌ ಎಂದು ಖ್ಯಾತಿ ಪಡೆದ ಕೂರ್ಗ್‌ ಕಡೆ ಪ್ರವಾಸ ಬರುವವರ ಸಂಖ್ಯೆ ಹೆಚ್ಚುತ್ತಿದೆಯಂತೆ. ಆದರೆ ನಾವು ಕರ್ನಾಟಕದಲ್ಲೇ ಇದ್ದು ಕೊಡಗು ನೋಡಿಲ್ಲ ಎಂದರೆ ಹೇಗೆ. ಈ ಮೇ ತಿಂಗಳಲ್ಲಿ ಬಿಸಿಲಿನ ತಾಪ ನಿವಾರಿಸಿಕೊಳ್ಳಲು ಮಡಿಕೇರಿ, ಕೊಡಗು ಕಡೆ ಪ್ರವಾಸ ಮಾಡಲು ಬಯಸಿದರೆ ಈ 6 ಜಾಗಗಳನ್ನು ಮಿಸ್ ಮಾಡದೇ ನೋಡಿ ಬನ್ನಿ.

ಅಬ್ಬೇ ಫಾಲ್ಸ್ ಕೊಡಗಿನಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಇದು ಕೊಡಗಿನ ಮುಖ್ಯ ಆಕರ್ಷಣೆ. ಕಾಫಿ ಎಸ್ಟೇಟ್‌ಗಳ ಮಧ್ಯೆ ಹರಿಯುವ ಸುಂದರ ಜಲಪಾತವಿದು. 70 ಅಡಿ ಎತ್ತರರಿಂದ ಧುಮ್ಮಕ್ಕುವ ಜಲಪಾತವಿದು. ಮಳೆಗಾಲದ ಸಮಯದಲ್...