ಭಾರತ, ಏಪ್ರಿಲ್ 27 -- ಬೇಸಿಗೆಯ ಶಾಖದಿಂದ ತ್ವರಿತ ಪರಿಹಾರ ಪಡೆಯಲು ನೀವು ಬಯಸುವಿರಾ. ಈ ಸೆಖೆಗೆ ತಂಪಾದ, ರುಚಿಕರವಾದ ತಿಂಡಿಯನ್ನು ಹುಡುಕುತ್ತಿದ್ದರೆ ಮೊಸರು ವಡೆ ಪಾಕವಿಧಾನ ಪ್ರಯತ್ನಿಸಬಹುದು. ಮೃದುವಾದ ವಡೆಯನ್ನು ಮೊಸರಿನಲ್ಲಿ ನೆನೆಸಿ ತಿಂದರೆ ಅದರ ರುಚಿಯೇ ಬೇರೆ. ಸಿಹಿ-ಹುಳಿ ಮಿಶ್ರಣದ ಈ ತಿಂಡಿಯನ್ನು ತಿನ್ನುತ್ತಿದ್ದರೆ ಅದರ ರುಚಿಯನ್ನು ವರ್ಣಿಸಲು ಸಾಧ್ಯವಿಲ್ಲ. ಮೊಸರು ವಡೆ ತಯಾರಿಸುವುದು ಕೂಡ ತುಂಬಾನೇ ಸುಲಭ. ಇದನ್ನು ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- 1 ಕಪ್, ಹಸಿ ಮೆಣಸಿನಕಾಯಿ - 1 ಅಥವಾ 2 (ಸಣ್ಣಗೆ ಕತ್ತರಿಸಿದ್ದು), ಶುಂಠಿ - 1/2 ಇಂಚು, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ - ಕರಿಯಲು, ದಪ್ಪ ಮೊಸರು - 2 ಕಪ್, ಸಕ್ಕರೆ - ಅರ್ಧ ಚಮಚ (ರುಚಿಗೆ ತಕ್ಕಷ್ಟು), ಕಾಳುಮೆಣಸು- 1/2 ಚಮಚ, ನೀರು - 1/2 ಕಪ್, ಚಿಲ್ಲಿ ಸಾಸ್ - 2 ಚಮಚ, ಟೊಮೆಟೊ ಸಾಸ್ - 2 ಚಮಚ, ಕೊತ್ತಂಬರಿ ಪುಡಿ - 1/2 ಚಮಚ, ಹುರಿದ ಜೀರಿಗೆ ಪುಡಿ - 1/2 ಚಮಚ, ಖಾರ ಮೆಣಸಿನ ಪುಡಿ- ...