ಭಾರತ, ಏಪ್ರಿಲ್ 6 -- ಬೇಸಿಗೆ ಬಿಸಿಲಿನ ಶಾಖಕ್ಕೆ ಮನೆಯಿಂದ ಹೊರಗಡೆ ಬರುವುದೇ ಹೆಚ್ಚಾಗಿದೆ. ನೆತ್ತಿ ಸುಡುವ ಬಿಸಿಲು ಒಂದೆಡೆಯಾದರೆ, ಧೂಳಿನ ಕಾಟ ಮತ್ತೊಂದೆಡೆ. ಬಿಸಿಲಿನಿಂದ ತುರಿಕೆ, ಶುಷ್ಕತೆ ಅಧಿಕವಾಗಿದೆ. ಹಲವು ಅನಾರೋಗ್ಯ ಸಮಸ್ಯೆಗಳೂ ಉದ್ಭವಿಸುತ್ತವೆ. ಇದರ ನಡುವೆ ಸೂಕ್ಷ್ಮವಾದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ. ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆಗೆ ಒಂದಿಷ್ಟು ಸಲಹೆಗಳು ಇಲ್ಲಿವೆ.

ಸೂರ್ಯನ ಬೆಳಕಿನಿಂದ ಕಣ್ಣಿಗೆ ಹಾನಿಯಾಗದಂತೆ ಯುವಿ ರಕ್ಷಣೆ ಹೊಂದಿರುವ ಸನ್​ಗ್ಲಾಸ್ ಧರಿಸಿ. ಯಾವಾಗಲೂ ಯುವಿಎ ಮತ್ತು ಯುವಿಬಿ ಕಿರಣಗಳಿಂದ ರಕ್ಷಿಸುವ ಸನ್ ಗ್ಲಾಸ್ ಧರಿಸುವುದು ಉತ್ತಮ.

ಸನ್​​ಗ್ಲಾಸ್ ಇಲ್ಲದೇ ಇರುವವರು ಅಗಲವಾದ ಅಂಚುಳ್ಳ ಟೋಪಿ ಧರಿಸಿ. ಇದು ನೇರ ಸೂರ್ಯನ ಬೆಳಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಕಣ್ಣುಗಳನ್ನು, ವಿಶೇಷವಾಗಿ ಕೊಳಕು ಕೈಗಳಿಂದ ಉಜ್ಜುವುದನ್ನು ತಪ್ಪಿಸಿ. ಏಕೆಂದರೆ, ಇದು ಕಣ್ಣುಗಳಿಗೆ ಬ್ಯಾಕ್ಟೀರಿಯಾ ಹರಡಿಸಲಿದೆ.

ಚರ್ಮ ಮತ್ತು ಕಣ್ಣುಗಳು ಎರಡನ್ನೂ ತೇವಾಂಶದಿಂದ ಇಡಬೇಕು. ನಿಮ್ಮ ಕಣ್ಣ...