Bangalore, ಏಪ್ರಿಲ್ 18 -- ಬೆಂಗಳೂರು: ಕರ್ನಾಟಕದಲ್ಲಿ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳು ಬಿರುಬಿಸಿಲಿನ ಅವಧಿ. ಹಿಂದಿನ ವರ್ಷದ ಮಳೆಗಾಲದಲ್ಲಿಯೇ ಸರಿಯಾಗಿ ಮಳೆಯಾಗಲಿಲ್ಲ. ಆದರೆ ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲೂ ಮಳೆ ಚೆನ್ನಾಗಿ ಆಗಿದೆ. ದಕ್ಷಿಣಕನ್ನಡ , ಬೆಂಗಳೂರು, ಮೈಸೂರು, ಕಲಬುರಗಿ, ಚಿಕ್ಕಮಗಳೂರು ಸಹಿತ 17 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯು ಬಿಡುಗಡೆ ಮಾಡಿದೆ. ಅದರಲ್ಲೂ ಮಾರ್ಚ್‌ ಏಪ್ರಿಲ್‌ ತಿಂಗಳಲ್ಲಿ ತೀವ್ರ ಬಿಸಿಲಿನ ದಿನಗಳನ್ನೇ ಹೆಚ್ಚು ಕಂಡ ಕಲಬುರಗಿ ಜಿಲ್ಲೆಯಲ್ಲೂ ಕೂಡ ಉತ್ತಮ ಮಳೆ ಸುರಿದಿದೆ. ಕರಾವಳಿ. ಮಲೆನಾಡು ಭಾಗದಲ್ಲೂ ಮಳೆ ಚೆನ್ನಾಗಿಯೇ ಆಗಿದೆ. ಕರ್ನಾಟಕದ 9 ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ನಾಲ್ಕು ಜಿಲ್ಲೆಯಲ್ಲಿ ಮಳೆ ಪ್ರಮಾಣ ಚೆನ್ನಾಗಿದೆ. ಕರ್ನಾಟಕದ ತೀವ್ರ ಮಳೆ ಕೊರತೆ ಎದುರಿಸಿದ ಜಿಲ್ಲೆಗಳ ಪಟ್ಟಿಯಲ್ಲಿ ಒಂದೇ ಇರುವುದು ವಿಶೇಷ. ಮಾರ್ಚ್‌ ನಿಂದ ಏಪ್ರಿಲ್‌ 17ರವರೆಗಿನ ಅವಧಿಯಲ್ಲಿ ಮಳೆಯಾದ ಪ್ರಮಾಣವಿದು.

ಕರ್ನಾಟಕದಲ್ಲಿ ...