Delhi, ಮೇ 18 -- ಮಾವಿನ ಹಣ್ಣಿನ ಸೀಸನ್‌ ನಡೆಯುತ್ತಿದ್ದು, ಎಲ್ಲೆಲ್ಲೂ ಮಾವಿನ ಘಮವೇ ಹರಡಿದೆ. ಬೇಸಿಗೆಯ ದಾಹ ತಣಿಯುವ ಜೊತೆ ನಾಲಿಗೆ ಚಪಲವನ್ನು ಕಡಿಮೆ ಮಾಡುವ ಕೆಲವು ಮಾವಿನ ಹಣ್ಣಿನ ಖಾದ್ಯಗಳನ್ನು ಈ ಸೀಸನ್‌ನಲ್ಲಿ ತಪ್ಪದೇ ತಿನ್ನಬೇಕು. ಬೇಸಿಗೆಯಲ್ಲಿ ಮಾವಿನ ಹಣ್ಣಿನ ಜ್ಯೂಸ್‌, ಮಿಲ್ಕ್‌ ಶೇಕ್‌, ಆಮ್‌ಪನ್ನಾದಂತಹ ಪಾನೀಯಗಳು ಸಹಜವಾಗಿ ಎಲ್ಲ ಕಡೆ ಸಿಗುತ್ತವೆ. ಆದರೆ ಈ ಆಫ್‌ಬೀಟ್‌ ಖಾದ್ಯಗಳು ನಿಜಕ್ಕೂ ಅಪರೂಪ. ಅಂತಹ ಕೆಲವು ರೆಸಿಪಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮಾವಿನ ಚೆನ್ನ ಪಾಯಸ: ನೀವು ಸಿಹಿ ತಿನಿಸುಗಳ ಪ್ರಿಯರಾದ್ರೆ ಬೇಸಿಗೆಯಲ್ಲಿ ಸವಿಯಲು ಮಾವಿನ ಚೆನ್ನಾ ಪಾಯಸ ಹೇಳಿ ಮಾಡಿಸಿದ್ದು. ಬಾಯಲ್ಲಿ ನೀರೂರಿಸುವ ಈ ಸಿಹಿ ಖಾದ್ಯವನ್ನು ತಯಾರಿಸಲು ಕಾಟೇಜ್‌ ಚೀಸ್‌ ಅಥವಾ ಚೆನ್ನಾವನ್ನು ಹಾಲಿನೊಂದಿಗೆ ಸೇರಿಸಿ ಅದು ನಯವಾದ ಮಿಶ್ರಣ ಆಗುವವರೆಗೂ ಬೆರೆಸಿ. ನಂತರ ಇದಕ್ಕೆ ತಾಜಾ ಮಾವಿನ ಪ್ಯೂರಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಒಣಹಣ್ಣುಗಳನ್ನು ತುಪ್ಪದಲ್ಲಿ ಹುರಿದು ಮಿಶ್ರಣ ಮಾಡಿ. ಈಗ ನಿಮ್ಮ ಮುಂದೆ ಮಾವಿನ ಚೆ...