Bengaluru, ಮಾರ್ಚ್ 8 -- ಋತುಗಳು ಬದಲಾದಂತೆ ಫ್ಯಾಷನ್ ಕೂಡ ಬದಲಾಗುತ್ತದೆ. ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿದೆ. ಹೀಗಾಗಿ ಹೆಂಗಳೆಯರುಬೇಸಿಗೆಯ ವಿಶೇಷ ಬಟ್ಟೆಗಳ ಶಾಪಿಂಗ್ ಮಾಡಲು ಶುರು ಮಾಡುತ್ತಾರೆ. ಅದರಲ್ಲೂ ಶುಭ ಕಾರ್ಯಕ್ರಮಗಳು ಈ ಋತುವಿನಲ್ಲಿ ತುಸು ಹೆಚ್ಚೇ ಇದೆ. ಹೀಗಾಗಿ ಹೆಣ್ಮಕ್ಕಳು ಬೇಸಿಗೆಗೆ ಹೊಂದಿಕೆಯಾಗುವ ಸೀರೆಗಳನ್ನುಡುತ್ತಾರೆ. ಸೀರೆ ಮಾತ್ರವಲ್ಲಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ರವಿಕೆ ಹೊಲಿಯುವುದು ಕೂಡ ಮುಖ್ಯ. ಇಲ್ಲಿ ಕೆಲವು ಅತ್ಯುತ್ತಮ ಕುಪ್ಪಸ ವಿನ್ಯಾಸಗಳಿವೆ. ಇವು ತುಂಬಾ ಸೊಗಸಾಗಿ ಕಾಣುತ್ತವೆ.

ಸ್ಟೈಲಿಶ್ ಬ್ಯಾಕ್ ವಿನ್ಯಾಸ:ಬೇಸಿಗೆಯಲ್ಲಿ ಆರಾಮ ಮತ್ತು ಶೈಲಿ ಎರಡನ್ನೂ ಕಾಪಾಡಿಕೊಳ್ಳಲು,ನೀವು ಈ ರೀತಿಯ ತೋಳಿಲ್ಲದ ಬ್ಲೌಸ್ ಹೊಲಿಯಬಹುದು. ಇದಕ್ಕೆ ಹೆಚ್ಚು ಸ್ಟೈಲಿಶ್ ಲುಕ್ ನೀಡಲು,ಹಿಂಭಾಗದಲ್ಲಿ ಈ ಕೀ ಹೋಲ್ ಪ್ಯಾಟರ್ನ್ ಅನ್ನು ಮಾಡಬಹುದು.ಇದು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ.

ಬೇಸಿಗೆಗೆ ಬೆಸ್ಟ್ಈ ಬ್ಲೌಸ್:ಬೇಸಿಗೆಗಾಗಿ ಈ ರೀತಿಯ ಬ್ಲೌಸ್ ಪೀಸ್ ಅನ್ನು ಸಹ ನೀವು ಹೊಲಿಯಬಹುದು. ನೆಕ್ ಡಿಸೈ...