ಭಾರತ, ಫೆಬ್ರವರಿ 26 -- ಬೇಸಿಗೆಯಲ್ಲಿ ನೀವು ಮಾಂಸಾಹಾರವನ್ನು ತಿನ್ನಬಹುದೇ ಎಂಬ ಬಗ್ಗೆ ನಿಮಗೆ ಯಾವುದೇ ಅನುಮಾನಗಳಿವೆಯೇ? ಏಕೆಂದರೆ ಬೇಸಿಗೆಯಲ್ಲಿ ಉರಿ ಬಿಸಿಲಿನ ಕಾರಣದಿಂದಾಗಿ ಹೆಚ್ಚು ಆಹಾರ ತಿನ್ನಲು ಸಾಧ್ಯವಾಗುವುದಿಲ್ಲ. ಚಳಿಗಾಲದಲ್ಲಿ ಹೆಚ್ಚೆಚ್ಚು ಮಾಂಸಾಹಾರ ಸೇವಿಸಿರಬಹುದು. ಆದರೆ, ಬೇಸಿಗೆಯಲ್ಲಿ ಹೆಚ್ಚು ಮಾಂಸಾಹಾರ ತಿನ್ನುವುದು ಉತ್ತಮವೇ. ಒಂದು ವೇಳೆ ತಿನ್ನಲು ಬಯಸಿದರೆ, ಚಿಕನ್, ಮಟನ್ ಮತ್ತು ಮೀನುಗಳಲ್ಲಿ ಯಾವುದನ್ನು ತಿನ್ನುವುದು ಉತ್ತಮ?

ಬೇಸಿಗೆಯಲ್ಲಿ, ದೇಹವು ನೈಸರ್ಗಿಕವಾಗಿ ಬಿಸಿಯಾಗಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ಮಾಂಸಾಹಾರ ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಮಾಂಸಾಹಾರವನ್ನು ತಿನ್ನುವುದು ಸ್ವಲ್ಪ ಕಷ್ಟವೇ ಸರಿ. ಮಾಂಸಾಹಾರವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಉತ್ತಮ.

ಮಾಂಸಾಹಾರಿ ಭಕ್ಷ್ಯಗಳಲ್ಲಿ ಚಿಕನ್, ಮಟನ್ ಮತ್ತು ಮೀನು ವಿಭಿನ್ನ ಆರೋಗ್ಯ ಪ್ರಯೋಜನಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ಹೀಗಾಗಿ ಪರಿಸ್...