Bengaluru, ಮಾರ್ಚ್ 17 -- ಬೇಸಿಗೆ ಈಗಾಗಲೇ ಆರಂಭವಾಗಿದ್ದು, ಸಹಜವಾಗಿ ಧೂಳು ಹೆಚ್ಚಿದೆ. ಹೊರಾಂಗಣದಲ್ಲಿ ಮಾತ್ರವಲ್ಲ ಮನೆಯೊಳಗೂ ಧೂಳಿನ ಸಮಸ್ಯೆ ಶುರುವಾಗಿದೆ. ಹೆಂಗಳೆಯರಿಗೆ ಮನೆ ಹೇಗೆ ಸ್ವಚ್ಛತೆ ಮಾಡುವುದು, ಈ ಧೂಳಿನಿಂದ ಪಾರಾಗುವುದಾದರೂ ಹೇಗೆ ಎಂಬ ಚಿಂತೆಯಾಗಿದೆ. ಧೂಳಿನ ಕಣಗಳಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ನಂತಹ ಅನೇಕ ಹಾನಿಕಾರಕ ಸೂಕ್ಷ್ಮಜೀವಿಗಳಿವೆ. ಇದರಿಂದ ವಿವಿಧ ಆರೋಗ್ಯ ಸಮಸ್ಯೆಗಳೂ ಕಂಡು ಬರುತ್ತವೆ.

ಅಷ್ಟೇ ಅಲ್ಲ ಧೂಳು ಗೃಹೋಪಯೋಗಿ ವಸ್ತುಗಳು, ಉಪಕರಣಗಳು ಮತ್ತು ಅಲಂಕಾರಿಕ ವಸ್ತುಗಳಿಗೆ ತುಂಬಾ ಹಾನಿಕಾರಕವಾಗಿದೆ. ಹೀಗಾಗಿ ಮನೆಯ ಧೂಳನ್ನು ತೊಡೆದುಹಾಕುವುದು ಹೇಗೆ ಎಂದು ನೀವು ಚಿಂತಿಸುತ್ತಿರಬಹುದು. ಮನೆಯಲ್ಲಿ ಧೂಳಿನಿಂದ ಬೇಸತ್ತಿದ್ದರೆ ಮತ್ತು ಮನೆಯನ್ನು ಧೂಳಿನಿಂದ ಮುಕ್ತವಾಗಿಡಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಒಂದು ದಿನ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ಸ್ವಚ್ಛಗೊಳಿಸದಿದ್ದರೆ, ಮರುದಿನ ಖಂಡಿತವಾಗಿಯೂ ಧೂಳಿನ ಪದರವನ್ನು ನೀವು ಕಾಣುತ್ತೀರಿ. ಮನೆಯಲ್ಲಿ ಇಷ್ಟೊಂದು ಧೂಳು ಏಕೆ ಇದೆ ...