Bengaluru, ಏಪ್ರಿಲ್ 28 -- ಬೇಸಿಗೆಯ ಬಿಸಿಲಿನ ದಿನಗಳು ಹೆಚ್ಚಾಗುತ್ತವೆ. ದಿನೇದಿನೇ ಸುಡು ಬಿಸಿಲಿನ ಶಾಖದಿಂದ ಜನರು ಬಳಲುತ್ತಿದ್ದಾರೆ. ಪಾದರಸದ ಮಟ್ಟ ಹೆಚ್ಚಾದಂತೆ, ಶಾಖದ ಅಲೆಯು ಅತ್ಯಂತ ಅಪಾಯಕಾರಿ ಮಟ್ಟ ತಲುಪುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಖದಿಂದ ಉಂಟಾಗುವ ಅಪಾಯವೂ ಹೆಚ್ಚುತ್ತಿದೆ. ಬಿಸಿ ಗಾಳಿಯಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಅದರಿಂದ ಸುಸ್ತು, ನಿರ್ಜಲೀಕರಣದಂತಹ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ನೀವು ಸುಡುವ ಬಿಸಿಲಿನಲ್ಲಿ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲೆಲ್ಲಾ, ಆಹಾರಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅತಿಮುಖ್ಯ.

ನಿಮ್ಮ ದೇಹವನ್ನು ತಂಪಾಗಿಸುವ ಹಾಗೂ ತಂಪಾಗಿಡುವ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದು ಅತ್ಯಗತ್ಯವಾಗಿದೆ. ಇದರಿಂದ ಶಾಖದ ಹೊಡೆತದಿಂದ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ. ನಿತ್ಯದ ಡಯಟ್‌ನಲ್ಲಿ ಕೆಲವು ಆಹಾರ, ಪಾನೀಯಗಳನ್ನು ಸೇರಿಸಿಕೊಳ್ಳುವುದರಿಂದ ಬೇಸಿಗೆ ಬಿಸಿಲಿನ ಸಮಸ್ಯೆಯನ್ನು ಬಹಳ ಸುಲಭವ...