ಭಾರತ, ಮೇ 5 -- ಬೇಸಿಗೆಯಲ್ಲಿ ಬಿಸಿಲಿಗೆ ಕೊತ್ತಂಬರಿ, ಪಾಲಾಕ್‌, ಪುದಿನಾದಂತಹ ಸೊಪ್ಪಗಳನ್ನು ತಾಜಾವಾಗಿ ಇರಿಸುವುದು ಖಂಡಿತ ಸವಾಲು. ತಾಜಾ ಸೊಪ್ಪನ್ನು ಖರೀದಿಸಿ ತಂದು ಫ್ರಿಜ್‌ನಲ್ಲಿ ಇಟ್ಟರೂ ಬೇಗನೆ ಬಾಡಿ ಹೋಗುತ್ತದೆ. ಸೂರ್ಯ ಕಿರಣಗಳ ಪ್ರತಾಪಕ್ಕೆ ಖರೀದಿಸಿ ತಂದ 2 ಗಂಟೆಗಳಲ್ಲಿ ಸೊಪ್ಪು ಬಾಡಿ ಹೋಗುತ್ತದೆ. 100 ಗ್ರಾಂ ಇದ್ದ ಸೊಪ್ಪು ಕೆಲ ಹೊತ್ತಿಗೆ ಬಾಡಿ ಹೋಗಿ 20 ಗ್ರಾಂ ನಷ್ಟಾಗುತ್ತದೆ. ಅಲ್ಲದೇ ಬೇಗನೆ ಒಣಗುವ ಕಾರಣ ಬಳಸುವುದು ಕಷ್ಟಸಾಧ್ಯವಾಗುತ್ತದೆ.

ಹಾಗಂತ ಬೇಸಿಗೆಯಲ್ಲಿ ಪುದಿನಾ ಎಲೆಗಳನ್ನು ತಾಜಾವಾಗಿ ಇಡುವುದು ಅಸಾಧ್ಯ ಅಂತೇನಲ್ಲ. ಬಿಸಿಲಿನ ದಿನಗಳಲ್ಲಿ ಪುದಿನಾ ಎಲೆ ಸ್ವಚ್ಛ ಮಾಡಲು ಹಾಗೂ ತಾಜಾವಾಗಿ ಇರಿಸಲು ಕೆಲವೊಂದು ಸಲಹೆಗಳನ್ನು ತಪ್ಪದೇ ಪಾಲಿಸಬೇಕು. ಈ ಟಿಪ್ಸ್‌ಗಳನ್ನು ಅನುಸರಿಸುವುದರಿಂದ ಒಂದು ವಾರದವರೆಗೆ ಪುದಿನಾ ಎಲೆಗಳನ್ನು ತಾಜಾವಾಗಿರುತ್ತವೆ, ಮಾತ್ರವಲ್ಲ ಅದರ ಸುವಾಸನೆಗೆ ಧಕ್ಕೆಯಾಗದಂತೆ ಬಳಸಬಹುದು. ನೀವು ಪುದಿನಾ ಹೆಚ್ಚಿಗೆ ಬಳಸುವವರಾದರೆ ಈ ಟಿಪ್ಸ್ ಅನುಸರಿಸಿ ನೋಡಿ.

ಪುದಿನಾ ಎಲೆಗಳನ್ನು ...