ಭಾರತ, ಮಾರ್ಚ್ 5 -- ಬೇಸಿಗೆಯ ದಿನಗಳು ಆರಂಭವಾಗಿವೆ. ಈ ಸಮಯದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುವುದು ಸಹಜ. ಬಿಸಿಲಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಹೈಡ್ರೇಟ್ ಆಗಿರುವುದು ಹಾಗೂ ದೇಹಕ್ಕೆ ಎಲೆಕ್ಟ್ರೋಲೈಟ್ ಅಂಶ ಒದಗಿಸುವುದು ಬಹಳ ಮುಖ್ಯ ಹಾಗೂ ಪ್ರತಿಯೊಬ್ಬರೂ ಇದರ ಪ್ರಾಮುಖ್ಯವನ್ನು ಅರಿತಿರಬೇಕು. ದೇಹಕ್ಕೆ ನಿರ್ಜಲೀಕರಣವಾದರೆ ಆರೋಗ್ಯ ಹದಗೆಡುತ್ತದೆ. ಅರಿವಿನ ಸಮಸ್ಯೆ, ದೈಹಿಕ ಕಾರ್ಯಗಳಲ್ಲಿ ತೊಂದರೆ ಉಂಟಾಗುವುದು, ಮೂತ್ರಪಿಂಡಗಳ ಸಾಮರ್ಥ್ಯ ಕುಂಠಿತವಾಗುವುದು, ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಕೊರತೆ, ಕೀಲುಗಳಲ್ಲಿ ನೋವು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಆ ಕಾರಣಕ್ಕೆ ಬೇಸಿಗೆಯಲ್ಲಿ ನಿರ್ಜಲೀಕರಣ ತಪ್ಪಿಸುವುದು ಬಹಳ ಅವಶ್ಯ.

ನೀರು ಮತ್ತು ಎಲೆಕ್ಟ್ರೋಲೈಟ್‌ಗಳು ನಮ್ಮ ದೇಹಕ್ಕೆ ಅಗತ್ಯವಾದ ಆಂತರಿಕ ಶಕ್ತಿಯನ್ನು ಇಂಧನ ರೂಪದಲ್ಲಿ ಒದಗಿಸುತ್ತವೆ. ಬೇಸಿಗೆಯ ದಿನಗಳಲ್ಲಿ ನಾವು ಮಾಡುವ ದೈಹಿಕ ಚುಟವಟಿಕೆಯನ್ನು ಅವಲಂಬಿಸಿ ನಮ್ಮ ದೇಹಕ್ಕೆ ಎಷ್ಟು ನೀರಿನ ಅಗತ್ಯವಿದೆ ಎಂಬುದನ್ನು ಕಂಡುಹಿಡಿಯಬೇಕು.

ಥರ್ಮೋರ್ಗ...