Bengaluru, ಏಪ್ರಿಲ್ 28 -- ಬೇಸಿಗೆ ಬಂತೆಂದರೆ ನಮ್ಮ ಆಹಾರ ಪದ್ಧತಿಗಳೆಲ್ಲವೂ ಬದಲಾಗುತ್ತದೆ. ಈ ದಿನಗಳಲ್ಲಿ ಹೈಡ್ರೇಟ್‌ ಆಗಿರುವುದೊಂದೇ ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳಲು ಇರುವ ಪ್ರಮುಖ ಮಾರ್ಗವಾಗಿದೆ. ಈ ದಿನಗಳಲ್ಲಿ ಶಾಖದಿಂದ ತಪ್ಪಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅದಕ್ಕೆ ನೀರು ಕುಡಿದರೆ ಸಾಲುವುದಿಲ್ಲ. ದೇಹವನ್ನು ಸದಾ ಚುರುಕಾಗಿಡುವ ಮತ್ತು ಆರೋಗ್ಯವನ್ನು ಕಾಪಾಡುವ ಪೂರಕ ಆಹಾರಗಳು, ಎಲೆಕ್ಟ್ರೋಲೈಟ್‌ಗಳು ಮತ್ತು ಅಗತ್ಯ ಪೋಷಕಾಂಶಗಳು ಬೇಕು. ಅಷ್ಟೇ ಅಲ್ಲದೇ ದೇಹವನ್ನು ತಂಪಾಗಿರಿಸುವ ಹಾಗೂ ರಕ್ಷಿಸಿಕೊಳ್ಳುವ ಆಹಾರಗಳು ಅವಶ್ಯವಾಗಿ ಬೇಕು.

ಸೂರ್ಯನ ಶಾಖದಿಂದ ಬಳಲುವ ದೇಹವನ್ನು ತಂಪಾಗಿಸುವ ಆಹಾರಗಳಲ್ಲಿ ಸೌತೆಕಾಯಿ ಬಹಳ ಪ್ರಮುಖವಾದುದು. ಇದು ನಾರಿನಂಶ ಮತ್ತು ನೀರಿನ ಅಂಶದಿಂದ ಸಮೃದ್ಧವಾಗಿದೆ. ಹಾಗಾಗಿ ಬೇಸಿಗೆಯ ಸೂಪರ್‌ ಆಹಾರವಾಗಿ ಸೌತೆಕಾಯಿಗೆ ಹೆಚ್ಚಿನ ಮಹತ್ವ ಇದೆ. ಸಲಾಡ್‌, ಸ್ಮೂಥಿ, ಡಿಪ್‌, ರೈತಾ ಮುಂತಾದವುಗಳಿಗೆ ಸೌತೆಕಾಯಿ ಸೇರಿಸಬಹುದು. ಇದು ರಿಫ್ರೆಶ್‌ಮೆಂಟ್‌ ತರಕಾರಿಗಳಲ್ಲಿಯೂ ಒಂದಾಗಿದೆ. ಬೇಸಿಗೆಯ...