Bengaluru, ಏಪ್ರಿಲ್ 27 -- ಮಜ್ಜಿಗೆ ಕುಡಿಯುವುದರಿಂದ ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ಹೈಡ್ರೇಟ್ ಆಗಿ ಉಳಿಯುವ ಸಮಯ ಇದು. ದೇಹ ತೇವಾಂಶಯುಕ್ತವಾಗಿರಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಕೇವಲ ನೀರು ಕುಡಿದು ಬೇಜಾರಾದರೆ ಹಣ್ಣುಗಳ ರಸ, ಮಜ್ಜಿಗೆಯನ್ನು ಸಹ ಕುಡಿಯಬಹುದು.

ಬೇಸಿಗೆಯಲ್ಲಿ ಹೈಡ್ರೇಟ್ ಆಗಲು, ನೀವು ದಿನಕ್ಕೆ ಎರಡು ಬಾರಿ ಕಿತ್ತಳೆ ರಸ, ನೀರು, ಹಣ್ಣುಗಳು ಮತ್ತು ಮಜ್ಜಿಗೆಯನ್ನು ಆಹಾರದಲ್ಲಿ ಸೇರಿಸಬೇಕು. ಮೊಸರಿಗಿಂತ ಮಜ್ಜಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ಬೇಸಿಗೆಯಲ್ಲಿ ಆರೋಗ್ಯಕ್ಕಾಗಿ ಮೊಸರಿಗಿಂತ ಮಜ್ಜಿಗೆ ಉತ್ತಮ. ಮಜ್ಜಿಗೆಯನ್ನು ಮೊಸರಿನಿಂದ ತಯಾರಿಸಲಾಗಿದ್ದರೂ, ಮೊಸರಿಗಿಂತ ಮಜ್ಜಿಗೆ ಏಕೆ ಉತ್ತಮ ಎಂದು ಆಶ್ಚರ್ಯವಾಗಬಹುದು. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕೆಲವು ವರದಿಗಳ ಪ್ರಕಾರ, ಮೊಸರು ಸಕ್ರಿಯ ಬ್ಯಾಕ್ಟೀರ...