ಭಾರತ, ಫೆಬ್ರವರಿ 28 -- ಈ ವರ್ಷ ಬೇಸಿಗೆ ಆರಂಭವಾಗಿ ಕೆಲ ದಿನಗಳ ಕಳೆಯುವ ಮೊದಲೇ ಬಿಸಿ ಝಳ ಜೋರಾಗಿದೆ. ಕೆಲವೆಡೆ ಶಾಖದ ಅಲೆಗಳು ಬೀಸುತ್ತಿವೆ. ಸಾಮಾನ್ಯವಾಗಿ ಏಪ್ರಿಲ್‌ ತಿಂಗಳಲ್ಲಿ ಇರುವಂತೆ ಫೆಬ್ರುವರಿ-ಮಾರ್ಚ್‌ನಲ್ಲೇ ಬಿಸಿಲಿನ ಪ್ರಖರ ಜೋರಾಗಿದೆ. ಹವಾಮಾನ ಬದಲಾವಣೆಯ ಪ್ರಕೃತಿಯಲ್ಲಿ ಮಾತ್ರವಲ್ಲ ಮನುಷ್ಯನ ಆರೋಗ್ಯದಲ್ಲೂ ಸಾಕಷ್ಟು ಬದಲಾವಣೆಗೆ ಕಾರಣವಾಗುತ್ತದೆ. ಬೇಸಿಗೆಯಲ್ಲಿ ಸೂರ್ಯನ ಅತಿನೇರಳೆ ಕಿರಣಗಳಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ.

ಡೀಹೈಡ್ರೇಷನ್‌ನಿಂದ ಫುಡ್‌ ಪಾಯಿಸನಿಂಗ್‌ವರೆಗೆ ಬೇಸಿಗೆಯಲ್ಲಿ ಸಾಮಾನ್ಯ ಕಾಡುವ ಕೆಲವು ಕಾಯಿಲೆಗಳಿವೆ. ಪ್ರತಿ ಬಾರಿಯೂ ಬಿಸಿಲಿನ ಕಾರಣಗಳಿಂದ ಜನರು ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ಬೇಸಿಗೆಯಲ್ಲಿ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಯಾವುವು, ಈ ಸಮಸ್ಯೆಗಳಿಂದ ತಪ್ಪಿಸಿಕೊಂಡು ಆರೋಗ್ಯ ರಕ್ಷಿಸಿಕೊಳ್ಳಲು ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವ ವಿವರ ಇಲ್ಲಿದೆ.

ಆಹಾರದಿಂದ ಹರಡುವ ರೋಗಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿರುತ್ತವೆ. ಇವು ಹೆಚ್ಚಾಗಿ ಹಾನಿಕಾ...