Bengaluru, ಮಾರ್ಚ್ 15 -- ಪ್ರತಿಯೊಬ್ಬ ಭಾರತೀಯ ಹುಡುಗಿಯ ವಾರ್ಡ್ರೋಬ್‌ನಲ್ಲಿಚೂಡಿದಾರ್ ಇದ್ದೇ ಇರುತ್ತವೆ. ಇವು ನೋಡಲು ಸೊಗಸಾಗಿರುವುದರ ಜೊತೆಗೆ,ತುಂಬಾ ಆರಾಮದಾಯಕವಾಗಿರುತ್ತದೆ. ಬೇಸಿಗೆಯಲ್ಲಿ ಚೂಡಿದಾರ್ ದೈನಂದಿನ ಉಡುಗೆಗೆ ಸೂಕ್ತ ಆಯ್ಕೆಯಾಗಿದೆ.ಈಗಾಗಲೇಬೇಸಿಗೆಯ ಆಗಮನವಾಗಿದ್ದು ಕಾಟನ್ ಚೂಡಿದಾರ್ ಹೊಲಿಸಬಹುದು. ಸರಳವಾಗಿ ಹೊಲಿಸುವ ಬದಲು ಈ ರೀತಿ ಸ್ಟೈಲಿಶ್ ಆಗಿ ಹೊಲಿಸಬಹುದು. ಇಲ್ಲಿವೆ ಕೆಲವು ನೆಕ್ ಡಿಸೈನ್‌ಗಳು.

ಚೂಡಿದಾರ್ ಹಿಂಭಾಗಕ್ಕೆ ಈ ಫ್ಯಾನ್ಸಿ ನೆಕ್ ವಿನ್ಯಾಸವನ್ನು ನೀವು ಆಯ್ಕೆ ಮಾಡಬಹುದು. ಹಿಂಭಾಗದಲ್ಲಿ ಝಿಗ್-ಜಾಗ್ ಮಾದರಿಯಲ್ಲಿ ದಾರವನ್ನು ಜೋಡಿಸುವ ಮೂಲಕ ತುಂಬಾ ಸೊಗಸಾದ ವಿನ್ಯಾಸವನ್ನು ರಚಿಸಲಾಗಿದೆ.ಇದಕ್ಕೆ ಸುಂದರವಾದ ಗೊಂಡೆಯನ್ನು ಕೂಡ ಜೋಡಿಸಬಹುದು.

ಸ್ವೀಟ್‌ಹಾರ್ಟ್ ನೆಕ್‌ಲೈನ್ ಹೊಂದಿರುವ ಫ್ಲೋಯಿ ತೋಳುಗಳು:ಅದು ಚೂಡಿದಾರ್ ಆಗಿರಲಿ ಅಥವಾ ಡ್ರೆಸ್ ಆಗಿರಲಿ,ಸ್ವೀಟ್‌ಹಾರ್ಟ್ ನೆಕ್‌ಲೈನ್ ಯಾವಾಗಲೂ ಆಕರ್ಷಕವಾಗಿ ಕಾಣುತ್ತದೆ. ನೀವು ಈ ರೀತಿಯ ನೆಕ್ ಲೈನ್ ಮತ್ತು ತೋಳುಗಳನ್ನು ಹೊಲಿಸುವ ಮೂಲಕ ಕುರ್ತ...