ಭಾರತ, ಮಾರ್ಚ್ 29 -- ಬೇವು-ಬೆಲ್ಲ ಸಮರಸದಿ ಬದುಕು ಸಿಹಿಯಾಗಿಸಲಿ ಯುಗಾದಿ. ಈ ದಿನ ಪ್ರಪಂಚ ಸೃಷ್ಟಿಯಾದ ದಿನ ಎಂದು ಹೇಳುತ್ತಾರೆ.

ಚೈತ್ರೇ ಮಾಸಿ ಜಗದ್ಬ್ರಹ್ಮಾ ಸಸರ್ಜ ಪ್ರಥಮೇಹನಿ|

ಶುಕ್ಲ ಪಕ್ಷೇ ಸಮಗ್ರಂತು, ತದಾ ಸೂರ್ಯೋದಯೇ ಸತಿ||

ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದದಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನು. ಆ ದಿನವೇ ಗ್ರಹ-ನಕ್ಷತ್ರ-ಮಾಸ-ಋತು-ವರ್ಷಾಧಿಪತಿಗಳನ್ನೂ ಸೃಷ್ಟಿಸಿ ಕಾಲಗಣನೆ ಆರಂಭಿಸಿದ. ಹಿಂದೂಗಳಿಗೆ 'ಯುಗಾದಿ' ಯುಗದ ಆದಿಯ ದಿನ. ಈ ಹಬ್ಬ ಯಾವ ವಾರ ಬರುತ್ತದೆಯೋ ಆ ವಾರಾಧಿಪತಿ ಆ ವರ್ಷದ ರಾಜ.

ಭಾನುವಾರ ಬಂದರೆ ರವಿ ಅಂದರೆ 'ಸೂರ್ಯ' ವರ್ಷದ ರಾಜನಾಗುತ್ತಾನೆ. ವರ್ಷದ ಆರಂಭದ ಸ್ಥಿತಿಯಲ್ಲಿ ಪೂರ್ತಿ ವರ್ಷದ ಸುಖದ ಪ್ರತೀಕವೆಂದು ಭಾವಿಸಿ ವರ್ಷ ಫಲವನ್ನು ಹೇಳುತ್ತಾರೆ. ಈ ದಿನ ಬೇವು ಬೆಲ್ಲ ಕೊಡುವಾಗ, ಹಿರಿಯರಿಗೆ ನಮಸ್ಕರಿಸುವಾಗ,

ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯಚ|

ಸರ್ವಾರಿಷ್ಟವಿನಾಶಾಯ ನಿಂಭಕಂದಲಭಕ್ಷಣಮ್||

ಸ್ತೋತ್ರ ಹೇಳಿ ಆಶೀರ್ವಾದ ಮಾಡುತ್ತಾರೆ. ಅಂದರೆ ನೂರು ವರ್ಷಗಳ ಕಾಲ ವ...