ಭಾರತ, ಮಾರ್ಚ್ 9 -- ಬೇಲೂರು ಕಟ್ಟಡ ದುರಂತ: ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ಭಾನುವಾರ ಭಾರಿ ದುರಂತ ಸಂಭವಿಸಿದ್ದು, ಮೂವರು ಮಹಿಳೆಯರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಬೇಲೂರು ಪಟ್ಟಣದಲ್ಲಿ ಹಳೆಯ ಕಟ್ಟಡದ ಸಜ್ಜಾ ಕುಸಿದು ಸಂಭವಿಸಿದ ದುರಂತ ಸಂಭವಿಸಿದೆ. ಮೃತರು ಬೀದಿ ಬದಿ ವ್ಯಾಪಾರಿಗಳಾಗಿದ್ದು, ಕಟ್ಟಡದ ನೆರಳಿನಲ್ಲಿ ವ್ಯಾಪಾರಕ್ಕೆ ಕುಳಿತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

Published by HT Digital Content Services with permission from HT Kannada....