Bengaluru, ಮಾರ್ಚ್ 27 -- ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಬೆಳವಣಿಗೆ, ನಗರ ಯೋಜನೆಗಳು ಸದಾ ಚರ್ಚೆಗೆ ಗ್ರಾಸವಾಗುವ ವಿಷಯಗಳು ಎಂಬುದರಲ್ಲಿ ಸಂದೇಹವೇ ಇಲ್ಲ. ಕರ್ನಾಟಕದ ಇತರ ನಗರಗಳು ಕಡೆಗಣಿಸಲ್ಪಟ್ಟಿದ್ದು ಬೆಂಗಳೂರು ಮಾತ್ರವೇ ಕ್ಷಿಪ್ರವಾಗಿ ವಿಸ್ತರಣೆಯಾಗುತ್ತಿದೆ ಎಂಬ ಟೀಕೆಯೂ ಇತ್ತೀಚೆಗೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ ಈಗ ಬೆಳ್ಳಂದೂರು ಭಾಗದ ವೈಮಾನಿಕ ನೋಟದ ಚಿತ್ರ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಬೆಂಗಳೂರು ನಗರಾಭಿವೃದ್ಧಿ ಯೋಜನೆ ಕುರಿತು ಬಿಸಿಬಿಸಿ ಚರ್ಚೆಗೆ ಇದು ವೇದಿಕೆ ಒದಗಿಸಿದ್ದು, 100ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನ ಪೋಸ್ಟ್ ವೀಕ್ಷಿಸಿದ್ದಾರೆ. ಅಂತಹ ಚರ್ಚೆ ಏನು ನಡೆಯಿತು ಗಮನಿಸೋಣ.

ಬೆಳ್ಳಂದೂರು ಡ್ರೋನ್ ಇಮೇಜ್‌ ನಗರ ಅಸಮಾನತೆಯ ಬಗ್ಗೆ ಬಿಸಿಬಿಸಿಯಾದ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಎರಡು ಪಕ್ಕದ ಸಮುದಾಯಗಳ ನಡುವಿನ ಸಂಪೂರ್ಣ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ, ಒ...