ಭಾರತ, ಫೆಬ್ರವರಿ 6 -- Belthangady Ghost Story: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಮಾಲಾಡಿ ಸಮೀಪದ ಮನೆಯೊಂದರಲ್ಲಿ ಪ್ರೇತಕಾಟದ ಶಂಕೆ ವ್ಯಕ್ತವಾಗಿದೆ. ಮಾಟ - ಮಂತ್ರದ ಭಯದೊಂದಿಗೆ ಊರು ತುಂಬಾ ಪ್ರೇತದ ಕಾಟ ಎಂದು ಆ ಮನೆಯಲ್ಲಿ ವಾಸವಿದ್ದ ಕುಟುಂಬ ಹೇಳಿಕೊಂಡು ಬಂದಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪ್ರೇತಕಾಟ ನಿಜವೋ ಅಥವಾ ಸುಳ್ಳೋ ಎಂಬುದನ್ನು ದೃಢೀಕರಿಸುವುದು ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ಸಾಧ್ಯವಾಗಿಲ್ಲ. ಆದಾಗ್ಯೂ, ಈ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿರುವ ಕಾರಣ ಮಾಹಿತಿ ದೃಷ್ಟಿಯಿಂದ ಇಲ್ಲಿ ನೀಡಲಾಗಿದೆ.

ಮಾಲಾಡಿಯ ಮನೆಯವರು ಪ್ರೇತಾತ್ಮ ಕಾಟದ ಬಗ್ಗೆ ಹೇಳಿಕೊಳ್ಳುತ್ತಿದ್ದು, ಇಡೀ ಕುಟುಂಬ ಹಲವು ರೀತಿಯ ಅನುಭವಗಳನ್ನು ಊರು ತುಂಬಾ ಹೇಳಿಕೊಳ್ಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಮನೆಯ ಬಾಲಕಿ ಕೂಡ ಪ್ರೇತಾತ್ಮದ ಅನುಭವ ಹೇಳುತ್ತಿದ್ದು, ಮೊಬೈಲ್‌ನಲ್ಲಿ ಫೋಟೋ ತೆಗೆದಾಗ ಕಂಡ ವಿಚಿತ್ರ ರೂಪ ಇದು ಎಂದು ಫೋಟೋವನ್ನು ತೋರಿಸಿದ್ದು, ಅದು ಕೂಡ ಈಗ ವೈರಲ್ ಆಗಿದ...