ಭಾರತ, ಮಾರ್ಚ್ 2 -- ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ವಿಷ, ತ್ಯಾಜ್ಯ ಮತ್ತು ಕಲ್ಮಶವನ್ನು ಹೊರ ಹಾಕುವ ಕೆಲಸವನ್ನು ಮೂತ್ರಪಿಂಡಗಳು ಮಾಡುತ್ತವೆ. ಅದಕ್ಕಾಗಿ ಮೂತ್ರಪಿಂಡಗಳು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿವೆ. ಅವು ರಕ್ತದಿಂದ ಕಲ್ಮಶಗಳನ್ನು ಶೋಧಿಸಿ ದೇಹದಿಂದ ಹೊರಹಾಕುತ್ತವೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುತ್ತವೆ. ಇದು ದೇಹದ ಇತರ ಭಾಗಗಳಿಗೂ ಹಾನಿಯನ್ನುಂಟುಮಾಡಬಹುದು. ಆದ್ದರಿಂದ, ಮೂತ್ರಪಿಂಡಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು.

ಮೂತ್ರಪಿಂಡಗಳು ವಿಫಲಗೊಳ್ಳಲು ಪ್ರಾರಂಭಿಸಿದಾಗ ದೇಹದಲ್ಲಿ ಕೆಲವು ಲಕ್ಷಣಗಳು ಗೋಚರಿಸಲು ಆರಂಭವಾಗುತ್ತದೆ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಈ ಕೆಲವು ಲಕ್ಷಣಗಳು ಕಂಡುಬಂದರೆ ಮೂತ್ರಪಿಂಡದ ಆರೋಗ್ಯದ ಬಗ್ಗೆ ನೀವು ತಕ್ಷಣ ಕಾಳಜಿ ವಹಿಸಬೇಕು ಎಂದರ್ಥ.

ಬೆಳಿಗ್ಗೆ ಎದ್ದ ತಕ್ಷಣ ಪಾದಗಳಲ್ಲಿ ಊತ ಕಂಡುಬಂದರೆ, ಅದನ್ನು ನಿರ್ಲಕ್ಷಿಸಬೇಡಿ. ಯಾವುದೇ ಸೋಂಕು ಇಲ್ಲದೆ ಕಾಲುಗಳಲ್ಲಿ ಊತವಿದ್ದರೆ, ಅದು ಮೂತ್ರಪಿಂಡಗಳ ಹಾನಿಯಿಂ...