Bengaluru, ಮಾರ್ಚ್ 2 -- ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು ಎಂದು ಬಹುತೇಕ ಮಹಿಳೆಯರು ಚಿಂತಿಸುತ್ತಾರೆ. ದಿನಾ ಒಂದೇ ರೀತಿಯ ಉಪಾಹಾರ ಮಾಡಿದ್ರೆ ಮನೆಮಂದಿ ಇಷ್ಟಪಡುವುದಿಲ್ಲ. ಹೀಗಾಗಿ ಪ್ರತಿದಿನ ಏನಾದರೂ ವಿಭಿನ್ನ ಪಾಕವಿಧಾನವನ್ನು ಪ್ರಯತ್ನಿಸಬೇಕು. ಇಂಥವರಿಗಾಗಿ ಇಲ್ಲಿ ಮಸಾಲೆ ಚಿತ್ರಾನ್ನ ರೆಸಿಪಿ ನೀಡಲಾಗಿದೆ. ಮನೆಯಲ್ಲಿ ಏನೂ ತರಕಾರಿ ಇಲ್ಲದಿದ್ದರೂ ಕೂಡ ಇದನ್ನು ತಯಾರಿಸಬಹುದು. ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಸಿದ್ಧವಾಗುವ ಈ ಖಾದ್ಯ, ಅದ್ಭುತ ರುಚಿಯನ್ನು ಹೊಂದಿರುತ್ತದೆ.

ಮಧ್ಯಾಹ್ನ ಅಥವಾ ರಾತ್ರಿ ಮಾಡಿದ ಅನ್ನ ಉಳಿದಿದ್ದರೂ ಈ ಖಾದ್ಯ ತಯಾರಿಸಬಹುದು. ಬೆಳಗ್ಗಿನ ಉಪಾಹಾರ ಮಾತ್ರವಲ್ಲ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಇದನ್ನು ಮಾಡಿ ತಿನ್ನಬಹುದು. ಈ ರೆಸಿಪಿ ತುಂಬಾ ಸುಲಭ. ಮನೆಯಲ್ಲೇ ಬಹಳ ಸರಳವಾಗಿ ತಯಾರಾಗುತ್ತದೆ ಈ ಖಾದ್ಯ. ಹಾಗಿದ್ದರೆ ಮಸಾಲೆ ಚಿತ್ರಾನ್ನ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಎಣ್ಣೆ - ಒಂದು ಚಮಚ, ತುಪ್ಪ - ಒಂದು ಚಮಚ, ಈರುಳ್ಳಿ - ಒಂದ...