Bengaluru, ಏಪ್ರಿಲ್ 8 -- ಬೆಳಗ್ಗಿನ ಜಾವದಲ್ಲಿ ಯೋಗವನ್ನು ಅಭ್ಯಸಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ದೈನಂದಿನ ಬ್ಯುಸಿ ಜೀವನದಲ್ಲಿ, ಬೆಳಗ್ಗೆ ಎದ್ದು ವೇಗವಾಗಿ ನಡೆಯುವ ಎಲ್ಲಾ ಕೆಲಸಗಳ ಮಧ್ಯೆ ನೀವು ಯೋಗವನ್ನು ರೂಢಿ ಮಾಡಿಕೊಳ್ಳಬೇಕೆಂದರೆ, ದಿನಾ ಏಳುವ ಸಮಯಕ್ಕಿಂತ ಒಂದು ಗಂಟೆ ಬೇಗ ಏಳಬೇಕು. ದಿನದ ಪ್ರಾರಂಭವೇ ನಮ್ಮ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ನಿರ್ಧರಿಸುತ್ತವೆ ಎಂಬುದು ಅಷ್ಟು ಜನರಿಗೆ ಗೊತ್ತಿಲ್ಲ. ಬೆಳಗ್ಗಿನ ಹೊತ್ತಿನಲ್ಲಿ ಯೋಗಾಭ್ಯಾಸ ಮಾಡುವ ಮೂಲಕ, ನೀವು ದೇಹ ಮತ್ತು ಮನಸ್ಸಿಗೆ ಸದೃಢವಾದ ಆರಂಭ ನೀಡಬಹುದು.

ಬೆಳಗ್ಗೆ, ವಿಶೇಷವಾಗಿ ಸೂರ್ಯೋದಯದ ಸಮಯದಲ್ಲಿ, ನಮ್ಮ ದೇಹ ಮತ್ತು ಮನಸ್ಸು ಶಾಂತವಾಗಿರುತ್ತವೆ. ಯೋಗ ತಜ್ಞರು ಇದನ್ನು ಸಾತ್ವಿಕ ಸಮಯ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಯೋಗ ಅಭ್ಯಾಸ ಮಾಡಿದರೆ:

* ಆಮ್ಲಜನಕ (oxygen) ದೇಹಕ್ಕೆ ಸರಿಯಾಗಿ ಹರಿದಾಡುತ್ತದೆ

* ಮನಸ್ಸಿಗೆ ಶಾಂತಿ ಒದಗುತ್ತದೆ

* ದಿನವಿಡೀ ಶಕ್ತಿಯುತ ಮತ್ತು ಸ್ಥಿರವಾಗಿರಲು ಸಹಾಯವಾಗುತ್ತದೆ

ಇದನ್ನೂ ಓದಿ: ಪ್ರತಿನಿತ್ಯ ಯೋಗಾಭ್ಯ...