ಭಾರತ, ಮಾರ್ಚ್ 7 -- ಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಕೇಳುವುದು ಏನು ತಿಂಡಿ ಮಾಡಿದ್ದೀರಿ ಎಂದು. ದಿನದಿನವೂ ಹೊಸತರ ಉಪಾಹಾರ ಮಾಡುವಂತೆ ಮಕ್ಕಳು ಬಯಸುತ್ತಾರೆ. ಪ್ರತಿದಿನ ಒಂದೇ ರೀತಿಯ ತಿಂಡಿ ಮಾಡಿದರೆ ಅವರು ತಿನ್ನುವುದೇ ಇಲ್ಲ. ಹೀಗಾಗಿ ಮಕ್ಕಳಿಗೆ ಆರೋಗ್ಯಕರ ಹಾಗೂ ರುಚಿಕರ ತಿಂಡಿ ತಯಾರಿಸುವುದು ಅಮ್ಮಂದಿರಿಗೆ ಒಂದು ಸವಾಲು. ಹೀಗಾಗಿ ದಿಢೀರನೆ ತಯಾರಿಸಬಹುದಾದ ರವೆ ವಡೆಯನ್ನು ಪ್ರಯತ್ನಿಸಬಹುದು. ಮಕ್ಕಳು ಮಾತ್ರವಲ್ಲ ವಯಸ್ಕರೂ ಕೂಡ ಇದನ್ನು ಇಷ್ಟಪಟ್ಟು ತಿಂತಾರೆ. ರುಚಿ ಕೂಡ ಅದ್ಭುತವಾಗಿರುತ್ತದೆ. ದಿಢೀರನೆ ರವೆ ವಡೆ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ರವೆ - 1 ಕಪ್, ನೀರು - 2 ಕಪ್, ಶುಂಠಿ - ಸಣ್ಣ ತುಂಡು, ಹಸಿ ಮೆಣಸಿನಕಾಯಿ - ಎರಡು ಅಥವಾ ಮೂರು, ಕಾಳುಮೆಣಸು - 1 ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ - ಕರಿಯಲು ಬೇಕಾದಷ್ಟು.

ಮಾಡುವ ವಿಧಾನ: ರವೆ ವಡೆ ಮಾಡುವ ಮೊದಲು, ಒಂದು ಪಾತ್ರೆಯನ್ನು ತೆಗೆದುಕೊಂಡು ಅದನ್ನು ಒಲೆ ಮೇಲಿಡಿ. ಅದಕ್ಕೆ ನೀರು ಹಾಕಿ ಬಿಸಿ ಮಾಡಿ....